ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ಕೇರಳದ ವಿದ್ಯಾರ್ಥಿಗಳ ಮೇಲೆ ನಡೆಸಿದ ಮಾರಣಾಂತಿಕ ಹಲ್ಲೆ ಖಂಡನೀಯ : ಅಶ್ರಫ್ ಬಡಾಜೆ

Prasthutha|

ಮಂಜೇಶ್ವರ : ಉಳ್ಳಾಲದ ಸೋಮೇಶ್ವರ ಸಮುದ್ರ ತೀರದಲ್ಲಿ ಕೇರಳದ ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಶ್ಕರ್ಮಿಗಳ ಕೃತ್ಯವನ್ನು ಎಸ್.ಡಿ.ಪಿ.ಐ ಮಂಜೇಶ್ವರ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಉಳ್ಳಾಲದ ಕ್ಷೇತ್ರ ವ್ಯಾಪ್ತಿಗೊಳಪಟ್ಟ ಸೋಮೇಶ್ವರ ಸಮುದ್ರ ತೀರದಲ್ಲಿ ಅನೈತಿಕ ಪೋಲೀಸ್ ಗಿರಿಯ ಮೂಲಕ ಕೇರಳದ ವಿದ್ಯಾರ್ಥಿಗಳ ಮೇಲೆ ನಡೆಸಲಾದ ಮಾರಣಾಂತಿಕ ಹಲ್ಲೆ ಖಂಡನೀಯ. ಕಾಂಗ್ರೆಸ್ ಸರಕಾರ ಅಧಿಕಾರವಹಿಸಿ ಒಂದು ತಿಂಗಳೊಳಗಾಗಿ ಕೋಮುವಾದಿ ಸಮಾಜದ್ರೋಹಿಗಳ ಅಟ್ಟಹಾಸ ಭುಗಿಲೆದ್ದಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಇಲಾಖೆಯು ಸಂಪೂರ್ಣವಾಗಿ ನಿಷ್ಕ್ರಿಯವಾಗಿರುವ ಸ್ಥಿತಿಯಲ್ಲಿ ಕೋಮುವಾದಿಗಳು ಸಂದರ್ಭವನ್ನುಪಯೋಗಿಸಿ ವ್ಯಾಪಕವಾಗಿ ಕೋಮುಗಲಭೆಗಳನ್ನು ನಡೆಸಲು ತಂತ್ರಗಳನ್ನು ರೂಪಿಸುತ್ತಿದ್ದಾರೆ. ಹಲ್ಲೆಕೋರರ ಮೇಲೆ ಗೂಂಡಾ ಕಾಯ್ದೆಯಂತಹ ಕಠಿಣ ಕಾಯ್ದೆಗಳನ್ನು ಹಾಕಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅಶ್ರಫ್ ಬಡಾಜೆ ಆಗ್ರಹಿಸಿದ್ದಾರೆ.