4 ದಿನಗಳಲ್ಲಿ 38 ಡ್ರಗ್​​​​ ಪೆಡ್ಲರ್​ಗಳನ್ನು ಬಂಧಿಸಿದ ಬೆಂಗಳೂರು ಪೊಲೀಸ್​

Prasthutha|

ಬೆಂಗಳೂರು: ನಗರದ 8 ವಿಭಾಗಗಳಲ್ಲಿ ಕಳೆದ 4 ದಿನಗಳಲ್ಲಿ 38 ಡ್ರಗ್​​ ಪೆಡ್ಲರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

55 ಕೆ.ಜಿ. ಗಾಂಜಾ, 215 ಗ್ರಾಂ ಗಾಂಜಾ ಎಣ್ಣೆ, 768 ಗ್ರಾಂ ಅಫೀಮು, 15 ಗ್ರಾಂ ಸಿಂಥೆಟಿಕ್ ಡ್ರಗ್ಸ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್​ ವ್ಯಸನಿಗಳು ಸೇರಿದಂತೆ 347 ಜನರ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ರಾಜ್ಯದಲ್ಲಿ ಇತ್ತೀಚೆಗೆ ಡ್ರಗ್ಸ್​ , ಗಾಂಜಾ ಜಾಲಗಳು ಪತ್ತೆಯಾಗುತ್ತಿದ್ದು, ಈ ಹಿನ್ನಲೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ.