ವಿಶ್ವದ ಅಗ್ರಮಾನ್ಯ ಟೆನಿಸ್ ಕ್ರೀಡಾಪಟು ಆಶ್ಲೆ ಬಾರ್ಟಿ ಟೆನಿಸ್’ಗೆ ವಿದಾಯ

Prasthutha|

ಬೆಂಗಳೂರು: ವಿಶ್ವದ ಅಗ್ರಮಾನ್ಯ ಟೆನಿಸ್ ಕ್ರೀಡಾಪಟು ಆಶ್ಲೆ ಬಾರ್ಟಿ ಅವರು ಟೆನಿಸ್’ಗೆ ನಿವೃತ್ತಿ ಘೋಷಿಸಿದ್ದಾರೆ. ಆಶ್ಲೆ ಅವರ ಹಠಾತ್ ನಿರ್ಧಾರಕ್ಕೆ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

- Advertisement -

ಈ ಬಗ್ಗೆ ತನ್ನ ಇನ್ ಸ್ಟಾಗ್ರಾಂ ನಲ್ಲಿ ಮಾಹಿತಿ ನೀಡಿರುವ ಅವರು ‘ಇದೊಂದು ದುಃಖಕರ ವಿದಾಯ’ ಎಂದು ತಿಳಿಸಿದ್ದು, ವಿದಾಯಕ್ಕೆ ನಿಖರ ಕಾರಣವನ್ನು ಬಹಿರಂಗಪಡಿಸಿಲ್ಲ.

ತನ್ನ ಆಪ್ತೆ, ಡಬಲ್ಸ್ ನಲ್ಲಿ ಜೊತೆ ಆಟಗಾರ್ತಿ ಕೇಸಿ ಡೆಲಕ್ವಾ ಅವರೊಂದಿಗೆ ನಡೆದ ವೀಡಿಯೋ ಸಂವಾದದಲ್ಲಿ ಮಾತನಾಡಿದ ಆಶ್ಲೆ, ನಾನು ನನ್ನ ಟೆನಿಸ್ ಕ್ರೀಡಾ ಬದುಕಿನಿಂದ ಸಂತೋಪವಾಗಿದ್ದು, ಈ ಆಟ ನನಗೆ ನೀಡಿದ ಪ್ರತಿಯೊಂದಕ್ಕೂ ಕೃತಜ್ಞಳಾಗಿದ್ದೇನೆ. ಈಗ ಇದರಿಂದ ದೂರ ಉಳಿಯಲು ಮತ್ತು ಇತರ ಕನಸಿನೊಂದಿಗೆ ಮುಂದೆ ಸಾಗಲು ಅತ್ಯುತ್ತಮ ಸಮಯ ಎಂದು ತಿಳಿದಿರುವುದಾಗಿ ಆಶ್ಲೆ ತಿಳಿಸಿದ್ದಾರೆ.

- Advertisement -

ಎರಡು ಬಾರಿ ವಿಶ್ವದ ಅಗ್ರಮಾನ್ಯ ಆಟಗಾರ್ತಿಯಾಗಿದ್ದ ಆಸ್ಟ್ರೇಲಿಯಾ ಮೂಲದ ಬಾರ್ಟಿ, ಮೂರು ಬಾರಿ ಗ್ರ್ಯಾನ್ ಸ್ಲಾಂ ಪ್ರಶಸ್ತಿಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದ್ದಾರೆ.

2019 ಎಅ ಪ್ರೆಂಚ್ ಓಪನ್, 2021 ರ ವಿಂಬಲ್ಡನ್ ಹಾಗೂ 2022 ರ ಆಸ್ಟ್ರೇಲಿಯನ್ ಓಪನ್ ನಲ್ಲಿ ವಿಜೇತರಾಗಿದ್ದರು. ಬಾರ್ಟ್ ಅವರು ಕಳೆದ ವರ್ಷದ ಕೊನೆಯಲ್ಲಿ ಗೆಳೆಯ ಗ್ಯಾರಿ ಕಿಸ್ಸಿಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.

Join Whatsapp