ಮಡಿಕೇರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರು ಮಡಿಕೇರಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಕೋವಿಡ್ ಸಂದರ್ಭದಲ್ಲಿ ಸರ್ಕಾರ ಘೋಷಣೆ ಮಾಡಿದ ಧನ ಸಹಾಯವನ್ನು ಇನ್ನೂ ಕೊಡಲಿಲ್ಲ. ಈ ಬಾರಿಯೂ ಸರ್ಕಾರ 200 ರೂಪಾಯಿ ಸಹಾಯದನವನ್ನು ಘೋಷಣೆ ಮಾಡಿತ್ತು. ಅದನ್ನು ಸಹ ಇನ್ನೂ ನೀಡದಿರುವುದಕ್ಕೆ ಸರ್ಕಾರದ ವಿರುದ್ಧ ಅಂಗನವಾಡಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಮಾಡಿದರು.
ನಮ್ಮ ದುಡಿಮೆಗೆ ತಕ್ಕಂತೆ ಗೌರವ ಧನ ದೊರೆಯುತ್ತಿಲ್ಲ. ಸರ್ಕಾರ ನೀಡುವ 400 ಸಾವಿರ ರೂಪಾಯಿಯಲ್ಲಿ ಸಂಸಾರ ನಡೆಸುವುದು ತುಂಬ ಕಷ್ಟವಾಗಿದೆ. ಅಲ್ಲದೆ ಅಶಾ ಕಾರ್ಯಕರ್ತರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೂ ಆಸ್ಪತ್ರೆಗಳಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ. ಈ ಹಿಂದೆಯೂ ಹಲವಾರು ಬೇಡಿಕೆಗಳನ್ನು ಇಟ್ಟಿದ್ದೇವೆ ಅವುಗಳಲ್ಲಿ ಪರಿಗಣಿಸಿ ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸರ್ಕಾರ ನಮ್ಮ ಬೇಡಿಕೆ ಈಡೇರಿಸದೆ ಇದ್ದಲ್ಲಿ ಮುಂದೆ ನಾವು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದಾಗಿ ಆಕ್ರೋಶ ವ್ಯಕ್ತ ಪಡಿಸಿದರು.