ಹೊಟ್ಟೆಪಾಡಿಗೆ ಬಟ್ಟೆಬಿಚ್ಚಿ ಓಡಾಡೋರಿಗೆ ಗಾಂಧಿ ಮೌಲ್ಯ ಏನು ಗೊತ್ತು: ರಮೇಶ್ ಕುಮಾರ್

Prasthutha|

ಬೆಂಗಳೂರು: ಹೊಟ್ಟೆಪಾಡಿಗಾಗಿ ಬಟ್ಟೆಬಿಚ್ಚಿ ಓಡಾಡೋರಿಗೇನು ಗೊತ್ತು ಗಾಂಧಿ ಮೌಲ್ಯ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಟಿ ಕಂಗನಾ ರಣಾತ್ ವಿರುದ್ಧ ಹರಿಹಾಯ್ದಿದಿದ್ದಾರೆ.

- Advertisement -


ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕ್ವಿಟ್ ಇಂಡಿಯಾ ಚಳವಳಿ ನಡೆಯುವಾಗ ಎಲ್ಲಿಗೆ ಹೋಗಿದ್ರಿ? ಆಗ ಹಿಂದೂ ಮಹಾಸಭಾ ಇರಲಿಲ್ವಾ? ಆರ್ ಎಸ್ ಎಸ್ ಇರಲಿಲ್ವಾ? ಕಸ್ತೂರ್ ಬಾ ಮೃತಪಟ್ಟಾಗ ನಿಮಗೆ ದುಃಖ ಆಗಲಿಲ್ವಾ? ಈಗ ಯಾವ ದೇಶಭಕ್ತಿ, ಮಹಾನ್ ದೇಶಭಕ್ತಿ ನಿಮ್ಮದು. ಭಾರತ್ ಮಾತಾಕೀ ಜೈ ಅಂತೀರಿ ಈಗ. ಯಾವ ಭಾರತ ಮಾತೆಯಪ್ಪ, ಅಂಬಾನಿ ಮಾತೆಯಾ? ಅದಾನಿ ಮಾತೆಯಾ ಅಥವಾ ಭಗತ್ ಸಿಂಗ್ ಭಾರತ್ ಮಾತೆಯಾ ಎಂದು ಪ್ರಶ್ನಿಸಿದರು.


ಕಾಂಗ್ರೆಸ್ ಏನೂ ಮಾಡಿಲ್ಲ ಮಾಡಿಲ್ಲ ಎಂದು ಸದಾ ಆರೋಪಿಸುತ್ತೀರಿ. ನೀವು ಏನು ಮಾಡಿದ್ದೀರಿ ನೋಡೋಣ. ನೆಹರು ಹುಟ್ಟಿದಾಗ ಕೆ.ಬಿ.ಹೆಡಗೆವಾರ್ ಹುಟ್ಟಿದರು. ಶಾಂತಿ ಕದಡಿದ ಮುಸಲೋನಿಯ ಶಿಷ್ಯ ಕೆ.ಬಿ.ಹೆಡಗೆವಾರ್. 2023ರೊಳಗೆ ಹಿಂದೂ ರಾಷ್ಟ್ರ ಮಾಡಬೇಕೆಂಬ ಯೋಚನೆ ನಿಮಗಿದೆ. ಹೀಗಾಗಿಯೇ ಸಿಎಎ, ಇನ್ನೊಂದು ಮಗದೊಂದು ತರುತ್ತಿದ್ದೀರಿ. ಬ್ರಿಟಿಷರಿಗೂ ಸಂಘಕ್ಕೂ ಯಾವುದೇ ರೀತಿ ವ್ಯತ್ಯಾಸವೇ ಇಲ್ಲ. ಕಾಂಗ್ರೆಸ್ ಪಕ್ಷದವರು ಬ್ರಿಟಿಷ್ ಸಂತತಿಗೆ ವಾರಸುದಾರರಲ್ಲ. ಆದರೆ ನೀವು ಬ್ರಿಟಿಷರ ವಾರಸುದಾರರು ಎಂದು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.

Join Whatsapp