ಪಾಕಿಸ್ತಾನ | ಬೆನಝೀರ್ ಭುಟ್ಟೊ ಕಿರಿ ಮಗಳು ಆಸೀಫಾ ರಾಜಕೀಯಕ್ಕೆ?

Prasthutha|

ಕರಾಚಿ : ಪಾಕಿಸ್ತಾನದ ಮಾಜಿ ಪ್ರಧಾನಿ ದಿವಂಗತ ಬೆನಝೀರ್ ಭುಟ್ಟೊ ಅವರ ಕಿರಿಯ ಪುತ್ರಿ ಆಸೀಫಾ ಭುಟ್ಟೊ ಝರ್ದಾರಿ ರಾಜಕೀಯ ಪ್ರವೇಶ ಮಾಡಿದ್ದಾರೆ. ಮುಲ್ತಾನ್ ನಲ್ಲಿ ಸೋಮವಾರ 11 ಪಕ್ಷಗಳ ವಿಪಕ್ಷ ಮೈತ್ರಿಕೂಟ ಪಾಕಿಸ್ತಾನ್ ಡೆಮಾಕ್ರಟಿಕ್ ಮೂವ್ ಮೆಂಟ್ (ಪಿಡಿಎಂ) ರ್ಯಾಲಿಯಲ್ಲಿ ಅವರು ಸಹೋದರ ಬಿಲಾವಲ್ ಭುಟ್ಟೊ ಪರವಾಗಿ ರಾಜಕೀಯ ರಂಗ ಪ್ರವೇಶಿಸಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ.

- Advertisement -

ಇಂದು ನಿಮ್ಮಲ್ಲೊಬ್ಬಳಾಗಿ ಇಲ್ಲಿ ನಿಂತಿದ್ದೇನೆ. ನನ್ನ ಸಹೋದರ ನಿಮ್ಮೆಲರ ಸಹೋದರ, ಪಕ್ಷದ ಅಧ್ಯಕ್ಷ ಬಿಲಾವಲ್ ಭುಟ್ರೊ ಝರ್ದಾರಿ ಕೊರೊನ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕಾರಣ ನಿಮ್ಮ ಎದುರು ನಿಂತಿದ್ದೇನೆ. ನನ್ನ ತಾಯಿಯನ್ನು ಹೇಗೆ ಬೆಂಬಲಿಸಿದ್ದೀರೋ ಅದೇ ರೀತಿ ನನ್ನ ಸಹೋದರನಿಗೂ ನೀವು ಬೆಂಬಲ ನೀಡುವಿರೆಂಬ ಭರವಸೆ ನನಗಿದೆ ಎಂದು ಆಸೀಫಾ ಹೇಳಿದ್ದಾರೆ.

ಪ್ರತಿ ಹೆಜ್ಜೆಯಲ್ಲೂ ನಿಮ್ಮೊಂದಿಗೆ ನಾನಿದ್ದೇನೆ. ನನ್ನ ಸಹೋದರನಿಗೆ ನಿಮ್ಮಂತೆಯೇ ಬೆಂಬಲವನ್ನೂ ನೀಡುವೆ ಎಂದು ಅವರು ಭರವಸೆ ನೀಡಿದರು.



Join Whatsapp