ರಾಹುಲ್ ಗಾಂಧಿ ಯಾರು? ನನಗೆ ಆತನ ಪರಿಚಯವಿಲ್ಲ: ಅಸಾದುದ್ದೀನ್ ಓವೈಸಿ

Prasthutha|

ನವದೆಹಲಿರಾಹುಲ್ ಗಾಂಧಿ ಯಾರು? ನನಗೆ ಆತನ ಪರಿಚಯವಿಲ್ಲ. ಆತ ಯಾರು ಎಂದು ನಿಮಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ ಎಂದು ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವ್ಯಂಗ್ಯವಾಗಿ ವಾಗ್ದಾಳಿ ನಡೆಸಿದ್ದಾರೆ. 

- Advertisement -

ರಾಷ್ಟ್ರೀಯ ಸುದ್ದಿ ವಾಹಿನಿ AAJ TAK ಆಯೋಜಿಸಿದ್ದ AGENDA ಚರ್ಚಾ ಕಾರ್ಯಕ್ರಮಮದಲ್ಲಿ ಭಾಗವಹಿಸಿ ಮಾತನಾಡಿದ ಅಸಾದುದ್ದೀನ್ ಓವೈಸಿ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಒಡೆದು ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಹುಲ್ ಗಾಂಧಿಯ ನಾಯಕತ್ವದಲ್ಲಿ ನಿಮಗೆ ನಂಬಿಕೆಯಿದೆಯಾ ಎಂಬ ನಿರೂಪಕಿಯ ಪ್ರಶ್ನೆಗೆ ಉತ್ತರಿಸಿದ ಓವೈಸಿ, ರಾಹುಲ್ ಗಾಂಧಿ ಯಾರು? ನನಗೆ ಆತನ ಪರಿಚಯವಿಲ್ಲ. ಆತ ಯಾರು ಎಂದು ನಿಮಗೆ ತಿಳಿದಿದ್ದರೆ ದಯವಿಟ್ಟು ತಿಳಿಸಿ ಎಂದು ಹೇಳಿದರು.

- Advertisement -

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಲವಾರು ರಾಜ್ಯಗಳಲ್ಲಿ ಏಕಕಾಲದಲ್ಲಿ ತಮ್ಮ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ವಿಸ್ತರಿಸಲು ನಡೆಸುತ್ತಿರುವ ಪ್ರಯತ್ನದ ಬಗ್ಗೆ ಪ್ರಸ್ತಾಪಿಸಿದ ಹೈದರಾಬಾದ್ ಸಂಸದ, ಮಮತಾ ಇತರ ರಾಜ್ಯಗಳಲ್ಲಿ ಹೋರಾಟವನ್ನು ಮುಂದುವರಿಸಬೇಕು, ಮುಂದಿನ ಎರಡು ಮೂರು ವರ್ಷದಲ್ಲಿ ಕಾಂಗ್ರೆಸ್‌ ಪಕ್ಷವು ಒಡೆದು ಚೂರಾಗುತ್ತದೆ ಎಂದರು.

ನಮ್ಮನ್ನು ಪ್ರತಿ ಪಕ್ಷದ ಬಿ-ಟೀಮ್ ಎಂದು ಪರಿಗಣಿಸಲಾಗಿದೆ. ನೀವು ರಾಹುಲ್ ಗಾಂಧಿಯನ್ನು ಇಲ್ಲಿಗೆ ಕರೆ ತಂದರೆ, ಅವರು ಬಿಜೆಪಿಯವರು ಮಾತನಾಡುವ ರೀತಿಯಲ್ಲೇ ಮಾತನಾಡುತ್ತಾರೆ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ಅದೇ ರೀತಿ ಮಾತನಾಡುತ್ತಾರೆ ಎಂದು ಓವೈಸಿ ಹೇಳಿದರು.

ಬಿಜೆಪಿ ಪ್ರತಿನಿಧಿಯಾಗಿ ಭಾಗವಹಿಸಿದ್ದ ಸುಧಾಂಶು ತ್ರಿವೇದಿ, ‘ಎಐಎಂಐಎಂನಂತಹ ಪಕ್ಷಗಳು ಮತ್ತು ಓವೈಸಿಯಂತಹ ನಾಯಕರು ಕೇರಳದಲ್ಲಿರುವ ಕಾಂಗ್ರೆಸ್‌ನಿಂದ ಬೆಳೆದು ಬಂದವರು, ಅಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಮೈತ್ರಿ ಮಾಡಿಕೊಂಡರು. ಬಂಗಾಳದಲ್ಲಿ ಅಬ್ಬಾಸ್ ಪಿರ್ಜಾದ ಪಕ್ಷದೊಂದಿಗೆ ಮತ್ತು ಅಸ್ಸಾಂನಲ್ಲಿ ಕಾಂಗ್ರೆಸ್,  ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎಫ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ’ ಎಂದರು.



Join Whatsapp