ಪ್ರಧಾನಿ ಕಚೇರಿಯಲ್ಲಿ ಆರೆಸ್ಸೆಸ್ ಗೌಪ್ಯ ಸಭೆ: ಉಗ್ರಪ್ಪ ಆರೋಪ

Prasthutha|

ಬೆಂಗಳೂರು: ಪ್ರಧಾನಿ ಮೋದಿ ವರ್ಚಸ್ಸು ಬಿದ್ದುಹೋಗಿರುವುದರಿಂದ ಚಿಂತಾಕ್ರಾಂತರಾಗಿರುವ ಆರೆಸ್ಸೆಸ್ ಮಂದಿ ಪ್ರಧಾನಿ ಕಚೇರಿಯಲ್ಲಿ ಗುಟ್ಟಿನ ಸಭೆ ನಡೆಸಿ ಮುಂದೆ ಯಾವ ಸುಳ್ಳು ಹೇಳುವುದು ಎಂದು ಚರ್ಚಿಸಿದ್ದಾರೆ ಎಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಆಪಾದಿಸಿದ್ದಾರೆ.

- Advertisement -


ಹೊಸಪೇಟೆಯಲ್ಲಿ ರಾಜೀವ್ ಗಾಂಧಿ ಪಂಚಾಯತ್ ರಾಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಪತ್ರಕರ್ತರ ಜೊತೆಗೆ ಮಾತನಾಡಿದರು.
ರಾವಣನ ಲಂಕೆಯಲ್ಲಿ ಪೆಟ್ರೋಲ್ ಬೆಲೆ ರೂ. 57, ರಾಮನ ಭಾರತದಲ್ಲಿ ರೂ. 104. ಸೀತೆಯ ನೇಪಾಳದಲ್ಲಿ ರೂ. 56, ಪಾಕಿಸ್ತಾನ, ಬಾಂಗ್ಲಾದೇಶದಲ್ಲೂ ಅಷ್ಟೇ. ಇದು ಬಿಜೆಪಿಯವರ ರಾಮರಾಜ್ಯ ಎಂದು ಉಗ್ರಪ್ಪ ನಗೆಯಾಡಿದರು.


ಬಿಜೆಪಿಯ ಸಿ. ಟಿ. ರವಿ, ನಳಿನ್ ಕುಮಾರ್ ಕಟೀಲ್ ತಿಳಿಗೇಡಿಗಳು. ಅವರ ಬಗೆಗೆ ಏನು ಮಾತನಾಡೋದು. ಬಿಜೆಪಿಯಿಂದ ಜನಸಾಮಾನ್ಯರಿಗಂತೂ ಉಳಿಗಾಲವಿಲ್ಲ ಎಂದು ಉಗ್ರಪ್ಪ ಹೇಳಿದರು.



Join Whatsapp