ಯುಎಇ ವೀಸಾ ನಿಯಮಾವಳಿಯಲ್ಲಿ ಸುಧಾರಣೆ: ಉದ್ಯೋಗ ಕಳೆದುಕೊಂಡ ಅನಿವಾಸಿಯರು 6 ತಿಂಗಳ ವಾಸ್ತವ್ಯಕ್ಕೆ ಅವಕಾಶ

Prasthutha|

ದುಬೈ: ಯುಎಇ ವೀಸಾ ನಿಯಮಾವಳಿಯಲ್ಲಿ ಮಹತ್ವದ ಸುಧಾರಣೆಗಳನ್ನು ಮಾಡಿರುವ ನಾಯಕತ್ವ ಯುಎಇಯಲ್ಲಿ ಉದ್ಯೋಗ ಕಳೆದುಕೊಂಡ ವಲಸಿಗರಿಗೆ ಶೀಘ್ರದಲ್ಲೇ 6 ತಿಂಗಳು ಯುಎಇಯಲ್ಲೇ ಉಳಿಯಲು ಅವಕಾಶ ನೀಡಲಾಗಿದೆ.

ಪ್ರಸಕ್ತ ಯುಎಇ ಜಾರಿಗೆಯಲ್ಲಿರುವ ಕಾನೂನಿನ್ವಯ ಉದ್ಯೋಗ ಕಳೆದಕೊಂಡ 30 ದಿನಗಳೊಳಗೆ ದೇಶದಿಂದ ನಿರ್ಗಮಿಸಬೇಕಾಗಿದೆ. ಭಾನುವಾರ ಯುಎಇ ಪ್ರಾಧಿಕಾರ ಈ ನಿಯಮಾವಳಿಯಲ್ಲಿ ತಿದ್ದುಪಡಿಗೊಳಿಸಿ ಉದ್ಯೋಗ ಕಳೆ ದುಕೊಂಡ ಅನಿವಾಸಿಯರು 3 ರಿಂದ 6 ತಿಂಗಳ ಕಾಲ ಯುಎಇಯಲ್ಲೇ ಉಳಿಯಬಹುದೆಂದು ತಿಳಿಸಿದೆ.

- Advertisement -

ಪ್ರಸಕ್ತ ಆದೇಶದನ್ವಯ ಉದ್ಯೋಗಿಗಳು ಇನ್ನೊಂದು ನೌಕರಿಯನ್ನು ಕಂಡುಹಿಡಿಯಲು ಸಾಕಷ್ಟು ಸಮಯಾವಕಾಶವನ್ನು ನೀಡಿದಂತಾಗಿದೆ. ಹಲವಾರು ಪ್ರತಿಭೆಗಳನ್ನು ಯುಎಇ ಯಲ್ಲೇ ಉಳಿಸುವ ನಿಟ್ಟಿನಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆಯೆಂದು ಯುಎಇ ವಿದೇಶಿ ವ್ಯಹಹಾರ ರಾಜ್ಯ ಸಚಿವ ಡಾ. ಥಾನಿ ಬಿನ್ ಅಹ್ಮದ್ ಅಲ್ ಜೆಯುಡಿ ತಿಳಿಸಿದ್ದಾರೆ.

ಈ ಆದೇಶದ ಜೊತೆಗೆ ಸುಧಾರಣೆ ತಂದಿರುವ ಇನ್ನೂ ಕೆಲವು ಅಂಶಗಳು ಈ ಕೆಳಗಿನಂತಿವೆ.
1) ಬಿಸಿನೆಸ್ ಪ್ರಯಾಣವನ್ನು 3 ತಿಂಗಳಿನಿಂದ 6 ತಿಂಗಳಿಗೆ ಏರಿಸುವುದು
2) ಕುಟುಂಬದ ಸದಸ್ಯರ ವೀಸಾ ಅಡಿಯಲ್ಲಿ ಹೆತ್ತವರಿಗೆ ಯುಎಇ ವೀಸಾಕ್ಕೆ ಅವಕಾಶ
3) ಮಾನವೀಯ ನೆಲೆಯಲ್ಲಿ 1 ವರ್ಷದ ವರೆಗೆ ವಾಸ್ತವ್ಯಕ್ಕೆ ಅವಕಾಶ
4) ಹೆತ್ತವರ ವೀಸಾದಲ್ಲಿ ನೆಲೆಸಿದ್ದ ಮಕ್ಕಳ ವಯೋಮಿತಿಯನ್ನು 18 ರಿಂದ 25 ಏರಿಸಲಾಗಿದೆ.

- Advertisement -