ಅರ್ನಬ್ ಗೋಸ್ವಾಮಿ ಹೇಬಿಯಸ್ ಕಾರ್ಪಸ್ ಅರ್ಜಿ ಒಂದೇ ದಿನದಲ್ಲಿ ವಿಚಾರಣೆಗೆ ನೆಟ್ಟಿಗರ ಆಕ್ಷೇಪ

Prasthutha|

ಮುಂಬೈ : ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿಯ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಶುಕ್ರವಾರ ವಿಚಾರಣೆ ನಡೆಸಿದ್ದು, ವಿಚಾರಣೆಯನ್ನು ಶನಿವಾರಕ್ಕೆ ಮುಂದೂಡಿದೆ.

- Advertisement -

ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಭಾರಿ ಚರ್ಚೆಗಳು ನಡೆದಿದ್ದು, ಕಾಶ್ಮೀರದಲ್ಲಿ ಸುಮಾರು 600 ಹೇಬಿಯಸ್ ಕಾರ್ಪಸ್ ಅರ್ಜಿಗಳಲ್ಲಿ ಶೇ.99 ಅರ್ಜಿಗಳು ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯಿಂದ ವಿಚಾರಣೆಗೆ ಬಾಕಿಯಿದೆ, ಆದರೆ ಗೋಸ್ವಾಮಿಯ ಅರ್ಜಿ ಒಂದೇ ದಿನದಲ್ಲಿ ವಿಚಾರಣೆಗೆ ಬಂದಿದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೆಲವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, “ಕೆಲವು ಜನರು ಇತರರಿಗಿಂತ ಹೆಚ್ಚು ಸಮಾನರು! ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ನೀತಿಯನ್ನು ಮರೆತುಬಿಡಿ’’ ಎಂದು ಆಕ್ರೋಶ ಹೊರಹಾಕಿದ್ದಾರೆ.

- Advertisement -

ಅಧ್ಯಾಪಿಕೆಯಾಗಿರುವ ಪ್ರಿಯಾ ಪ್ರಕಾಶ್, “ಅರ್ನಬ್ ಮನವಿ ಒಂದು ದಿನದೊಳಗೆ ವಿಚಾರಣೆಗೆ ಬಂದಿದೆ. ಆದರೆ, ಕಾಶ್ಮೀರದಲ್ಲಿನ 600 ಮನವಿಗಳಲ್ಲಿ ಶೇ.99 ಅರ್ಜಿಗಳು 2019ರ ಆಗಸ್ಟ್ 6ರಿಂದ ಬಾಕಿ ಉಳಿದಿವೆ. ಕೆಲವು ಜನರು ಇತರರಿಗಿಂತ ಹೆಚ್ಚು ಸಮಾನರು! ಕಾನೂನಿನ ಮುಂದೆ ಸಮಾನತೆಯ ತತ್ವವನ್ನು ಮರೆತುಬಿಡಿ’’ ಎಂದು ಹೇಳಿದ್ದಾರೆ.

ವಿಷಯಕ್ಕೆ ಸಂಬಂಧಿಸಿದ ಆಯ್ದ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ.

Join Whatsapp