ಸೇನಾ ಹೆಲಿಕಾಪ್ಟರ್ ದುರಂತ: ಬಿಜೆಪಿಯ ವಿದೇಶಾಂಗ ಮಂತ್ರಿ ಮತ್ತು ಆದಿತ್ಯನಾಥ್ ಕುರಿತು ಮೌನ ವಹಿಸಿದ ಬಲಪಂಥೀಯರಿಂದ ಕೊಹ್ಲಿ ಮೇಲೆ ಕೆಂಗಣ್ಣು !

Prasthutha: December 9, 2021

ಸಂಘಿ ಮಾಧ್ಯಮಗಳು ತಮ್ಮ ಅಜೆಂಡಾದಲ್ಲಿ ನಿರತವಾಗಿದೆಯೆಂದ ನೆಟ್ಟಿಗರು !

ನವದೆಹಲಿ: ಬುಧವಾರ ನಡೆದ ಸೇನಾ ಹೆಲಿಕಾಪ್ಟರ್ ದುರಂತದ ಸಮಯದಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಡಿದ್ದ ಟ್ವೀಟನ್ನು ಮಾತ್ರ ಉಲ್ಲೇಖಿಸಿ ಬಲಪಂಥೀಯ ಮಾಧ್ಯಮಗಳು ಅವರನ್ನು ಗುರಿಪಡಿಸಿದೆ. ಆದರೆ ಬಿಜೆಪಿಯ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಮತ್ತು ಕೇಂದ್ರ ವಿದೇಶಾಂಗ ಮಂತ್ರಿ ಜೈಶಂಕರ್ ಅವರು ಕೂಡಾ ಇದೇ ಸಮಯದಲ್ಲಿ ಮಾಡಿದ್ದ ಟ್ವೀಟ್ ಗಳಲ್ಲಿ ಕೇವಲ ಪ್ರಧಾನಿ ಮೋದಿಯನ್ನು ಹೊಗಳಿಕೆಗೆ ತಮ್ಮ ಟ್ವೀಟನ್ನು ಸೀಮಿತಿಗೊಳಿಸಿದ್ದು ಈ ಮಾಧ್ಯಮಗಳಿಗೆ ಕಾಣಿಸಲೇ ಇಲ್ಲ. ಈ ಕುರಿತು ನೆಟ್ಟಿಗರು, “ದುರಂತದ ಸಮಯದಲ್ಲೂ ಬಲಪಂಥೀಯ ಮಾಧ್ಯಮಗಳು ತಮ್ಮ ಅಜೆಂಡಾವನ್ನು ಹರಡುವುದರಲ್ಲಿ ಮಾತ್ರ ನಿರತವಾಗಿದೆ” ಎಂದು ಕಿಡಿ ಕಾರಿದ್ದಾರೆ.

ವಿರಾಟ್ ಕೊಹ್ಲಿ ಹೆಲಿಕಾಪ್ಟರ್ ದುರಂತದ ಕುರಿತು ಯಾವುದೇ ಟ್ವೀಟ್ ಮಾಡದೆ ಒಂದು ಜಾಹೀರಾತು ಶೂಟಿಂಗ್ ನ ಟ್ವೀಟ್ ಮಾಡಿದ್ದರು. ಅದರ ಜೊತೆಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಡಾ. ಎಸ್. ಜಯಶಂಕರ್, ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಕೂಡಾ ಹೆಲಿಕಾಪ್ಟರ್ ದುರಂತದ ಕುರಿತು ಯಾವೊಂದು ಟ್ವೀಟನ್ನು ಮಾಡದೆ, ಪ್ರಧಾನಿ ಮೋದಿಯನ್ನು ವೈಭವೀಕರಿಸಿದ್ದರು. ಆದರೆ ಬಲಪಂಥೀಯ ಮಾಧ್ಯಮಗಳು ಕೇವಲ ವಿರಾಟ್ ಕೊಹ್ಲಿ ಟ್ವೀಟನ್ನು ಮಾತ್ರ ತಮ್ಮ ಟ್ರೋಲಿಗೆ ಬಳಸಿಕೊಂಡಿದೆ.

ಇದರಿಂದ ಅಕ್ರೋಶಗೊಂಡ ನೆಟ್ಟಿಗರು ಮಾಧ್ಯಮದ ಈ ನಡೆಯ ವಿರುದ್ಧ ಹರಿಹಾಯ್ದಿದ್ದರು. ಮಾತ್ರವಲ್ಲ ಬಿಜೆಪಿ ಎಂಬ ರಣಹದ್ದುಗಳಿಗೆ ತಮ್ಮ ಅಜೆಂಡಾದ ಬಗ್ಗೆ ಮಾತ್ರ ಕಾಳಜಿಯಿದೆ ಎಂದು ತಿಳಿಸಿದ್ದಾರೆ.

ಬುಧವಾರ ಹೆಲಿಕಾಪ್ಟರ್ ದುರಂತ ಸೇನಾ ಮುಖ್ಯಸ್ಥ ಸೇರಿ 13 ಮಂದಿ ಮೃತಪಟ್ಟ ಘಟನೆಯ ದುರಂತದಲ್ಲಿರುವಾಗ ಬಿಜೆಪಿಯ ಸಚಿವ ಮತ್ತು ಮುಖ್ಯಮಂತ್ರಿ ಪ್ರಧಾನಿಯನ್ನು ವೈಭವೀಕರಿಸುವುದು ಸರಿಯಲ್ಲ ಎಂದು ಟ್ವೀಟ್ ಮೂಲಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!