ಮುತ್ತೂಟ್ ಫಿನ್‌ಕಾರ್ಪ್‌ನಲ್ಲಿ ದರೋಡೆ ಯತ್ನ| ಗುಂಡಿನ ದಾಳಿಯಲ್ಲಿ ಓರ್ವ ಸಾವು

Prasthutha|

ಲೂಧಿಯಾನ: ಪಂಜಾಬ್‌ನ ಧಾರೇಸಿಯಲ್ಲಿರುವ ಮುತ್ತೂಟ್ ಫಿನ್‌ಕಾರ್ಪ್ ಶಾಖೆಯನ್ನು ದರೋಡೆ ಮಾಡಲು ಯತ್ನಿಸಿದ ಮೂವರು ಬಂದೂಕುಧಾರಿಗಳಲ್ಲಿ ಒಬ್ಬನು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ.

- Advertisement -

ಬಂದೂಕುಧಾರಿ ದರೋಡೆಕೋರರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ. ದರೋಡೆಕೋರರಲ್ಲಿ ಒಬ್ಬನನ್ನು ಕಂಪನಿಯ ಸಿಬ್ಬಂದಿಗಳು ಮತ್ತು ಸ್ಥಳೀಯರು ಹಿಡಿದಿದ್ದಾರೆ. ಮತ್ತೊಬ್ಬ ಪರಾರಿಯಾಗಿದ್ದಾನೆ.

ಬ್ಯಾಂಕ್ ಮ್ಯಾನೇಜರ್ ಮತ್ತು ಭದ್ರತಾ ಸಿಬ್ಬಂದಿಗೂ ಗುಂಡು ತಗುಲಿ ಗಾಯಗಳಾಗಿವೆ ಎಂದು ವರದಿಯಾಗಿದೆ.
ಜಂಟಿ ಪೊಲೀಸ್ ಆಯುಕ್ತ ಜೆ. ಇಳಂಜೇರಿಯನ್ ನೇತೃತ್ವದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ.
ದಾಳಿಕೋರರಲ್ಲಿ ಒಬ್ಬನನ್ನು ಕೊಲ್ಲಲಾಗಿದ್ದು, ಹಣ ಮತ್ತು ಚಿನ್ನವನ್ನು ದೋಚುವ ಅವರ ಪ್ರಯತ್ನ ವಿಫಲವಾಗಿದೆ ಎಂದು ಜೆಸಿಪಿ ತಿಳಿಸಿದ್ದಾರೆ.

Join Whatsapp