ತಂದೆಯ ಸರ್ವೀಸ್ ಪಿಸ್ತೂಲ್’ಗೆ ಬಲಿಯಾದ ಬಾಲಕ..!

Prasthutha|

ಗೋವಾ: ಸರ್ವೀಸ್ ರಿವಾಲ್ವಾರ್’ನಿಂದ ಆಕಸ್ಮಿಕವಾಗಿ ಹಾರಿದ ಗುಂಡು 4 ವರ್ಷ ಪ್ರಾಯದ ಬಾಲಕನ ಜೀವವನ್ನೇ ಕಸಿದುಕೊಂಡಿದೆ. ಉತ್ತರ ಗೋವಾದ ಬಿಕೊಲಿಮ್ ಎಂಬಲ್ಲಿ ಈ ದಾರಣ ಘಟನೆ ನಡೆದಿದೆ.

- Advertisement -


ಕರ್ತವ್ಯ ಮುಗಿಸಿ ಮನೆಗೆ ಮರಳಿದ್ದ ಪೊಲೀಸ್ ಹೆಡ್ ಕಾನ್ಸ್ ಸ್ಟೆಬಲ್ ದಶರತ್ ವೈಗಾಂಕರ್ ತಮ್ಮ ಸರ್ವೀಸ್ ರಿವಾಲ್ವರ್’ ಅನ್ನು ಟೇಬಲ್ ಮೇಲೆ ಇಟ್ಟು ಸ್ನಾನಕ್ಕೆ ತೆರಳಿದ್ದರು. ಇದೇ ವೇಳೆ ಮನೆಯಲ್ಲಿ ಆಟವಾಡುತ್ತಿದ್ದ 4 ವಯಸ್ಸಿನ ದಶರತ್ ಪುತ್ರ ರಿವಾಲ್ವರ್ ಕೈಗೆತ್ತಿಕೊಂಡಿದ್ದಾನೆ. ಈ ವೇಳೆ ಆಕಸ್ಮಿಕವಾಗಿ ಪಿಸ್ತೂಲ್’ನಿಂದ ಗುಂಡು ಹಾರಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.


ಅಸಹಜ ಸಾವು ಎಂದು ಪ್ರಕರಣ ದಾಖಲಿಸಿರುವುದಾಗಿ ಬಿಕೊಲಿಮ್ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ.

Join Whatsapp