ನೈಜಿರಿಯಾ ಜೈಲಿನ ಮೇಲೆ ಶಸ್ತ್ರಧಾರಿಗಳ ದಾಳಿ | 1800 ಖೈದಿಗಳು ಪರಾರಿ!

Prasthutha|

ವಾರಿ : ಜೈಲಿನ ಮೇಲೆ ಶಶಸ್ತ್ರಧಾರಿಗಳು ದಾಳಿ ನಡೆಸಿ 1800 ಖೈದಿಗಳನ್ನು ಬಂಧಮುಕ್ತಗೊಳಿಸಿ ಪರಾರಿಯಾಗಿರುವ ಘಟನೆ ನೈಜಿರಿಯಾದಲ್ಲಿ ನಡೆದಿದೆ. ಓವೇರಿ ಬಂಧೀಖಾನೆ ಮೇಲೆ ಮಧ್ಯರಾತ್ರಿ ಶಸ್ತ್ರಧಾರಿಗಳ ಗುಂಪು ಗ್ರೆನೆಡ್ ದಾಳಿ ನಡೆಸಿ ಮಿಷನ್‍ಗನ್‍ಗಳಿಂದ ಮನ ಬಂದಂತೆ ಗುಂಡು ಹಾರಿಸಿ 1800 ಖೈದಿಗಳನ್ನು ಬಂಧಮುಕ್ತಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

- Advertisement -

ಪೊಲೀಸರು ಮತ್ತು ಶಸ್ತ್ರಧಾರಿಗಳ ನಡುವೆ ಎರಡು ಗಂಟೆಗೂ ಹೆಚ್ಚು ಕಾಲ ಗುಂಡಿನ ಚಕಮಕಿ ನಡೆದು ದಾಳಿಕೋರರು ಹಾಗೂ ಪೊಲೀಸರು ಗಾಯಗೊಂಡಿದ್ದು, ಘಟನೆಯಲ್ಲಿ ಜೈಲಿನ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಪರಾರಿಯಾಗಿರುವ ಎಲ್ಲಾ ಖೈದಿಗಳನ್ನು ಮತ್ತೆ ಬಂಧಿಸಲು ತ್ವರಿತ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಜೈಲು ವಕ್ತಾರ ಫ್ರಾನ್ಸಿಸ್ ಏನೋಬೋರೋ ತಿಳಿಸಿದ್ದಾರೆ.

ಇದುವರೆಗೂ ಯಾವ ಸಂಘಟನೆಗಳೂ ಜೈಲು ದಾಳಿಯ ಹೊಣೆ ಹೊತ್ತಿಲ್ಲ. ಆದರೆ, ಇಗ್ಬೋ ಜನರ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಈಸ್ಟರ್ನ್ ಸೆಕ್ಯೂರಿಟಿ ನೆಟ್‍ವರ್ಕ್ ಈ ಕೃತ್ಯವೆಸಗಿರುವ ಸಾಧ್ಯತೆಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ.



Join Whatsapp