ಸೌದಿ ಅರೇಬಿಯಾ : ಕೆ.ಎಂ.ವೈ.ಎ ಪೂರ್ವ ಪ್ರಾಂತ್ಯ ಅಧ್ಯಕ್ಷರಾಗಿ ನೌಶಾದ್ ರಶೀದ್ ಕಾಟಿಪಳ್ಳ

Prasthutha|

ದಮ್ಮಾಮ್: ಕಾಟಿಪಳ್ಳ ಮುಸ್ಲಿಂ‌ ಯೂತ್ ಅಸೋಸಿಯೇಶನ್,  ಈಸ್ಟರ್ನ್ ಪ್ರೋವಿನ್ಸ್ ನ ಅಧ್ಯಕ್ಷರಾಗಿ ಸಮಾಜ‌ ಸೇವಕ ನೌಶಾದ್ ರಶೀದ್ ಕಾಟಿಪಳ್ಳ ಆಯ್ಕೆಯಾಗಿದ್ದಾರೆ. ಶುಕ್ರವಾರದ ಜುಮಾ ನಮಾಝ್ ನ ಬಳಿಕ ಜುಬೈಲ್ ನಲ್ಲಿ ನಡೆದ ಸಂಘಟನೆಯ 32ನೆ ಮಹಾಸಭೆಯಲ್ಲಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ಕಳೆದ 20 ವರ್ಷಗಳಿಂದ ಸೌದಿ ಅರೇಬಿಯಾದಲ್ಲಿರುವ ನೌಶಾದ್ ಕಾಟಿಪಳ್ಳ ಹಲವು ಅನಿವಾಸಿ ಸಂಘಟನೆಗಳಲ್ಲಿ ಕ್ರಿಯಾಶೀಲರಾಗಿದ್ದಾರೆ. ಭಾರತೀಯ ರಾಯಭಾರಿ ಕಚೇರಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ ಅನಿವಾಸಿ ಭಾರತೀಯ ಕಾರ್ಮಿಕರಿಗೆ ನೆರವಾಗುತ್ತಾ ಬಂದಿದ್ದಾರೆ.

- Advertisement -

ಮಹಾಸಭೆಯ ಅಧ್ಯಕ್ಷತೆಯನ್ನು  ಕೆ.ಎಂ.ವೈ.ಎ ಅಧ್ಯಕ್ಷ ಪಿ.ಎ.ಮುಹಮ್ಮದ್ ವಹಿಸಿದ್ದರು. ಇಸ್ಮಾಯೀಲ್ ಕಾಟಿಪಳ್ಳ ದುಆ ನಡೆಸಿದರು. ಸಭೆಯಲ್ಲಿ ಗೌರವ ಅಧ್ಯಕ್ಷರಾಗಿ ಪಿ.ಎ.ಮುಹಮ್ಮದ್ ಬಶೀರ್, ಕೋಶಾಧಿಕಾರಿಯಾಗಿ ಪಿ.ಎಂ.ತಾಜುದ್ದೀನ್, ಸಲಹೆಗಾರರಾಗಿ ನಝೀರ್, ಬಿ.ಎಂ.ರಫೀಕ್, ಆಸಿಫ್, ಸಂಘಟನಾ ಕಾರ್ಯದರ್ಶಿಯಾಗಿ ಶಕೀಲ್, ಜೊತೆ ಕಾರ್ಯದರ್ಶಿಯಾಗಿ ಶರ್ವಾನ್, ಮಾಧ್ಯಮ ಕಾರ್ಯದರ್ಶಿಯಾಗಿ ನೌಫಾಲ್ ಆಯ್ಕೆಯಾದರು‌.

ಆಡಿಟರ್ ಅಬ್ದುಲ್ ಗಫೂರ್ ಚುನಾವಣಾಧಿಕಾರಿಯಾಗಿ ಸದಸ್ಯರನ್ನು ನೇಮಕ ಮಾಡಿದರು. ದಮ್ಮಾಮ್, ಕೋಬರ್, ಜುಬೈಲ್, ಅಲ್ ಹಸಾ ಮತ್ತು ಜೀಝಾನ್ ನ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿದ್ದು, ರಿಯಾದ್, ಜಿದ್ದಾ ಹಾಗೂ ತವರಿನಲ್ಲಿರುವ ಸದಸ್ಯರು ಝೂಂ ಮೀಟಿಂಗ್ ಮೂಲಕ ಕಾರ್ಯಕ್ರಮದ ಭಾಗವಾಗಿದ್ದರು.

ಅಮಾನುದ್ದೀನ್ ಕುರ್ ಆನ್ ಪಠಿಸಿದರೆ ಶರ್ವಾನ್ ಇಬ್ನ್ ಮುಹ್ಯಿದ್ದೀನ್ ಸ್ವಾಗತಿಸಿದರು. ಇಕ್ಬಾಲ್ ಕಾಟಿಪಳ್ಳ ರವರು‌ ರಚಿಸಿದ ಮರ್ಹಬ ಯಾ ಶಹರ್ ರಮಾಳಾನ್ ಬುಲೆಟಿನ್ ಬಿಡುಗಡೆಗೊಳಿಸಲಾಯಿತು. ಇಸ್ಮಾಯೀಲ್ ಕಾಟಿಪಳ್ಳ ಕಾರ್ಯಕ್ರಮ ನಿರೂಪಿಸಿ ವಂದಿಸಿದರು‌.

- Advertisement -