ಬಾಲಿವುಡ್ ನಟ ಅರ್ಮಾನ್ ಕೊಹ್ಲಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಮುಂಬೈ ನ್ಯಾಯಾಲಯ

Prasthutha|

ಪುಣೆ: ಮಾದಕ ದೃವ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಅರ್ಮಾನ್ ಕೊಹ್ಲಿಯ ಜಾಮೀನು ಅರ್ಜಿಯನ್ನು ಮುಂಬೈ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ. ಮಾತ್ರವಲ್ಲದೆ ಆತನನ್ನು ಈ ಪ್ರಕರಣದಲ್ಲಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

- Advertisement -

ಮುಂಬೈನಲ್ಲಿರುವ ಆತನ ನಿವಾಸದಿಂದ ಡ್ರಗ್ ಪತ್ತೆಯಾದ ಕಾರಣ ಎನ್.ಸಿ.ಬಿ ಆತನನ್ನು ಕಳೆದ ಭಾನುವಾರ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಹ್ಲಿ ಅವರನ್ನು 24 ಗಂಟೆಗಳ ಕಾಲ ಎನ್.ಸಿ.ಬಿ ಕಸ್ಟಡಿಯಲ್ಲಿದ್ದರು.

ಅರ್ಮಾನ್ ಕೊಹ್ಲಿ ನಿವಾಸಕ್ಕೆ ಎನ್.ಸಿ.ಬಿ ದಾಳಿ ನಡೆಸಿದ ಸಂದರ್ಭದಲ್ಲಿ ಏಜೆನ್ಸಿ ಪ್ರಶ್ನೆಗಳಿಗೆ ಅವರು ತಡಕಾಡಿದ್ದರು. ಎನ್.ಸಿ.ಬಿ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಅವರು ಕೊಹ್ಲಿಯನ್ನು ಅವರ ನಿವಾಸದಿಂದ ಮಾದಕ ದೃವ್ಯಗಳನ್ನು ವಶಪಡಿಸಿಕೊಂಡ ನಂತರ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ವಿಚಾರಣೆಗಾಗಿ ವಶಕ್ಕೆ ಪಡೆದರು.

Join Whatsapp