ತಾಯ್ನಾಡಿಗೆ  ಮರಳಿದ ವಿಶ್ವಚಾಂಪಿಯನ್‌ ಅರ್ಜೆಂಟಿನಾ; ಮುಖ್ಯ ರಸ್ತೆಗಳಲ್ಲಿ ತೆರೆದ ಬಸ್‌ನಲ್ಲಿ ಮೆರವಣಿಗೆ

Prasthutha|

ವೃತ್ತಿಜೀವನದ 5ನೇ ಮತ್ತು ಅಂತಿಮ ವಿಶ್ವಕಪ್‌ನಲ್ಲಿ, 35ನೇ ವಯಸ್ಸಿನಲ್ಲಿ ತನ್ನ ಮಾಂತ್ರಿಕ ಪಾದ ಚಲನೆಯಿಂದ ಅರ್ಜೆಂಟಿನಾಗೆ 3ನೇ ವಿಶ್ವಕಪ್‌ ಕಿರೀಟ ತೊಡಿಸಿದ ಲಿಯೋನೆಲ್‌ ಮೆಸ್ಸಿ ಮತ್ತು ಸಂಗಡಿಗರಿಗೆ ತವರೂರಿನಲ್ಲಿ ಅದ್ಧೂರಿ ಸ್ವಾಗತ ದೊರಕಿದೆ.

- Advertisement -

ದೋಹಾದಿಂದ ಅರ್ಜೆಂಟಿನಾದ ರಾಜಧಾನಿ ಬ್ಯೂನಸ್ ಐರಿಸ್‌ನಲ್ಲಿರುವ ಎಝೀಝಾ ವಿಮಾನ ನಿಲ್ದಾಣಕ್ಕೆ ಮೆಸ್ಸಿ ಬಳಗ ಬಂದಿಳಿದಿದೆ. ಮಿರುಗುವ ಚಿನ್ನದ ಟ್ರೋಫಿಯೊಂದಿಗೆ ಸಾರಥಿ ಮೆಸ್ಸಿ ಮೊದಲನೆಯವರಾಗಿ ವಿಮಾನದ ಮೆಟ್ಟಿಲಿಳಿದು ಬರುತ್ತಿರುವ ದೃಶ್ಯವನ್ನು ಅಲ್ಲಿನ ಮಾಧ್ಯಮಗಳು ನೇರ ಪ್ರದರ್ಶನ ಮಾಡಿದೆ.  ಆ ಬಳಿಕ ತೆರೆದ ಬಸ್‌ನಲ್ಲಿ ಆಟಗಾರರು, ಕೋಚ್‌ ಲಯೊನೆಲ್‌ ಸ್ಕಲೋನಿ ಹಾಗೂ ಸಹಾಯಕ ಸಿಬ್ಬಂದಿ ಮೆರವಣಿಗೆಯ ಮೂಲಕ ಮುಖ್ಯ ರಸ್ತೆಗಳಲ್ಲಿ ಸಾಗಿದರು. ಈ ವೇಳೆ ಚಾಂಪಿಯನ್ನರನ್ನು ಸ್ವಾಗತಿಸಲು ಕಿಲೋ ಮೀಟರ್​ ಉದ್ದಕ್ಕೆ ಜನರು ಸಾಲಾಗಿ ನಿಂತಿದ್ದರು. ಪುಟ್ಟ ಮಕ್ಕಳಿಂದ ಹಿಡಿದು, ಹಿರಿಯ ನಾಗರಿಕರಲ್ಲಿ ಬಹುತೇಕ ಮಂದಿ ಮೆಸ್ಸಿ ಧರಿಸುವ 10 ನಂಬರ್‌ ಜೆರ್ಸಿ ಧರಿಸಿ, ಆಟಗಾರರತ್ತ ಕೈಬೀಸಿದರು. ಇಕ್ಕೆಲಗಳ ಕಟ್ಟಡಗಳ ಮೇಲೂ ಅರ್ಜೆಂಟೀನಾದ ಬೃಹತ್‌ ಧ್ವಜಗಳು ರಾರಾಜಿಸುತ್ತಿದ್ದವು.

ಮರಡೋನಾ ಸಾರಥ್ಯದಲ್ಲಿ 1998ರಲ್ಲಿ ವಿಶ್ವಕಪ್‌ ಗೆದ್ದಿದ್ದ ಅರ್ಜೆಂಟಿನಾ 36 ವರ್ಷಗಳ ಬಳಿಕ, ಭಾನುವಾರ ಕತಾನ ಲುಸೈಲ್‌ ಸ್ಟೇಡಿಯಂನಲ್ಲಿ ಫ್ರಾನ್ಸ್‌ ತಂಡವನ್ನು ರೋಚಕವಾಗಿ ಮಣಿಸಿ ಫುಟ್‌ಬಾಲ್‌ ವಿಶ್ವಸಾಮ್ರಾಟನಾಗಿ  ಮರೆದಿತ್ತು.



Join Whatsapp