ದೇಶದ ಆರು ಹೈಕೋರ್ಟ್ ಗಳಿಗೆ ಮುಖ್ಯ ನ್ಯಾಯಮೂರ್ತಿಗಳ ನೇಮಕ

Prasthutha|

ನವದೆಹಲಿ: ದೇಶದ ವಿವಿಧ ಹೈಕೋರ್ಟ್ ಗಳಿಗೆ ಆರು ಮಂದಿ ಮುಖ್ಯ ನ್ಯಾಯಮೂರ್ತಿಗಳನ್ನು ನೇಮಿಸಿ ಕೇಂದ್ರ ಸರ್ಕಾರ ಭಾನುವಾರ ಆದೇಶ ಹೊರಡಿಸಿದೆ.

- Advertisement -

ಮುಖ್ಯ ನ್ಯಾಯಮೂರ್ತಿಗಳಾಗಿ ಪದೋನ್ನತಿ ಪಡೆದ ಆರು ಮಂದಿ ನ್ಯಾಯಮೂರ್ತಿಗಳ ವಿವರ ಹೀಗಿದೆ:

ನ್ಯಾ. ವಿಪಿನ್ ಸಾಂಘಿ (ಪ್ರಸ್ತುತ ದೆಹಲಿ ಹೈಕೋರ್ಟ್) – ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿಯೋಜನೆ

- Advertisement -

ನ್ಯಾ. ಸತೀಶ್ ಚಂದ್ರ ಶರ್ಮಾ (ಪ್ರಸ್ತುತ ತೆಲಂಗಾಣ ಹೈಕೋರ್ಟ್) – ದೆಹಲಿ ಹೈಕೋರ್ಟ್

ನ್ಯಾ. ಎ ಎ ಸಯೀದ್ (ಪ್ರಸ್ತುತ ಬಾಂಬೆ ಹೈಕೋರ್ಟ್) – ಹಿಮಾಚಲ ಪ್ರದೇಶ ಹೈಕೋರ್ಟ್

ನ್ಯಾ. ಎಸ್ ಎಸ್ ಶಿಂಧೆ (ಪ್ರಸ್ತುತ ಬಾಂಬೆ ಹೈಕೋರ್ಟ್) – ರಾಜಸ್ಥಾನ ಹೈಕೋರ್ಟ್

ನ್ಯಾ. ರಶ್ಮಿ ಎಂ ಛಾಯಾ (ಪ್ರಸ್ತುತ ಗುಜರಾತ್) – ಗೌಹಾಟಿ ಹೈಕೋರ್ಟ್

ನ್ಯಾ. ಉಜ್ಜಲ್ ಭುಯನ್ (ಪ್ರಸ್ತುತ ತೆಲಂಗಾಣ) – ತೆಲಂಗಾಣ ಹೈಕೋರ್ಟ್

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರ ನೇತೃತ್ವದ ಕೊಲಿಜಿಯಂ ಈ ನೇಮಕಾತಿಗಳನ್ನು ಮೇ 17, 2022ರಂದು ಶಿಫಾರಸ್ಸು ಮಾಡಿತ್ತು. ಮುಂದಿನ ಕ್ರಮವಾಗಿ ಕೇಂದ್ರ ಸರ್ಕಾರವು ಜೂನ್ 19ರಂದು ನೇಮಕಾತಿ ಆದೇಶವನ್ನು ಹೊರಡಿಸಿದೆ.

Join Whatsapp