ಚುನಾವಣೆಗಾಗಿ ಜಾತಿ ಮಂತ್ರಿಗಳ ನೇಮಕ, ಯೋಗಿ ಕಾಲೆಳೆದ ಮಾಯಾವತಿ

Prasthutha|

ಲಕ್ನೋ: ಚುನಾವಣೆ ಎದುರಿರುವಾಗ 7 ಜನರನ್ನು ಹೊಸದಾಗಿ ಜಾತಿ ಆಧಾರದ ಉತ್ತರ ಪ್ರದೇಶದ ಮಂತ್ರಿ ಮಂಡಲಕ್ಕೆ ತೆಗೆದುಕೊಂಡಿರುವುದನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಮಾಯಾವತಿ ಟ್ವೀಟ್ ಮಾಡಿದ್ದಾರೆ. ಮತದಾರರನ್ನು ಮರುಳು ಮಾಡಲು ಜಾತಿ ಆಧಾರದಲ್ಲಿ ಚುನಾವಣೆ ಕಾಲದಲ್ಲಿ ಮಂತ್ರಿ ಮಾಡಿರುವುದು ಸರಿಯಲ್ಲ ಎಂದು ಅವರು ಟೀಕಿಸಿದ್ದಾರೆ.

- Advertisement -


ನಿನ್ನೆ ಮಂತ್ರಿ ಮಾಡಿದ ಏಳೂ ಜನರನ್ನು ಆಯಾ ಜಾತಿಯ ಮತ ಪಡೆಯುವ ಏಕೈಕ ಉದ್ದೇಶದಿಂದ ನೇಮಿಸಲಾಗಿದೆ. ಇವರಿಗೆ ಚುನಾವಣಾ ನೀತಿ ಸಂಹಿತೆ ಎಲ್ಲ ಲೆಕ್ಕಕ್ಕಿಲ್ಲವೆ ಎಂದು ಮಾಯಾವತಿ ಪ್ರಶ್ನಿಸಿದ್ದಾರೆ.


ಇತ್ತೀಚೆಗೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಜಿತಿನ್ ಪ್ರಸಾದ್ ಸಹಿತ ಏಳು ಜನರನ್ನು ಭಾನುವಾರ ಯೋಗಿಯವರು ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡಿದ್ದರು. ಪಾಲ್ತು ರಾಂ, ಚತ್ತರ್ ಪಾಲ್ ಸಿಂಗ್ ಗಂಗ್ವಾರ್, ಸಂಗೀತಾ ಬಲವಂತ್, ಧರ್ಮವೀರ್ ಸಿಂಗ್, ಸಂಜೀವ್ ಕುಮಾರ್ ಮತ್ತು ದಿನೇಶ್ ಕಾರ್ತಿಕ್ ಹೊಸದಾಗಿ ಮಂತ್ರಿಗಳಾದವರು.

Join Whatsapp