ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

Prasthutha|

ಮಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಮೌಲಾನ ಆಜಾದ್ ಮಾದರಿ (ಆಂಗ್ಲ ಮಾಧ್ಯಮ) ಶಾಲೆಗಳಲ್ಲಿ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

- Advertisement -


ಆಸಕ್ತ ವಿದ್ಯಾರ್ಥಿಗಳು ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮತ್ತು ತಾಲೂಕು ಅಲ್ಪಸಂಖ್ಯಾತರ ಮಾಹಿತಿ ಕೇಂದ್ರದಿಂದ ಉಚಿತವಾಗಿ ಅರ್ಜಿ ಪಡೆದು, ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಮಾ.10ರೊಳಗೆ ಅರ್ಜಿ ಪಡೆದ ಸ್ಥಳಗಳಲ್ಲಿಯೇ ಸಲ್ಲಿಸಬೇಕು.


ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮೌಲಾನ ಆಜಾದ್ ಭವನ ಓಲ್ಡ್ ಕೆಂಟ್ ರಸ್ತೆ ಪಾಂಡೇಶ್ವರ ಮಂಗಳೂರು ದೂರವಾಣಿ ಸಂಖ್ಯೆ- 0824-2211078, ತಾಲೂಕು ಅಲ್ಪಸಂಖ್ಯಾತರ ವಿಸ್ತರಣಾಧಿಕಾರಿ ಮಂಗಳೂರು ಉಪವಿಭಾಗ ಪುತ್ತೂರು 9483218454. ಕುದ್ರೋಳ್ಳಿ 8496830090, ಉಳಾಯಿ ಬೆಟ್ಟು 7022125839, ಗುರು ಕಂಬಳ 7899541073, ಹುದು 9742972679, ಮೂಲರಪಟ್ನ 9964305390, ಮಂಜನಾಡಿ 9686445399, ಬೋಳಿಯಾರ್ 9449937134 ಪುತ್ತೂರು 8660948731 ಈ ಮೂಬೈಲ್ ಗಳಿಗೆ ಸಂಪರ್ಕಿಸುವಂತೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



Join Whatsapp