ಧರ್ಮವನ್ನು ಪಾಲಿಸುವವರಿಗೆ ಶಿಕ್ಷಣ ನಿರಾಕರಿಸಲಾಗದು, ಹಿಜಾಬ್ ಧರಿಸುವ ಹಕ್ಕನ್ನು ಸಂವಿಧಾನವೇ ನೀಡಿದೆ; ಎ.ಪಿ. ಅಬೂಬಕರ್ ಮುಸ್ಲಿಯಾರ್

Prasthutha|

ಕೋಝಿಕ್ಕೋಡ್: “ಭಾರತವು ಜಾತ್ಯಾತೀತ ರಾಷ್ಟ್ರವಾಗಿದ್ದು, ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ತಾನು ಬಯಸಿದ ಧರ್ಮವನ್ನು ಆಚರಿಸುವ, ಪಾಲಿಸುವ ಹಕ್ಕುಗಳಿವೆ. ಧಾರ್ಮಿಕ ಸ್ವಾತಂತ್ರ್ಯವನ್ನು ಮೂಲಭೂತ ಹಕ್ಕಾಗಿ ಪರಿಗಣಸಲಾಗುತ್ತಿದೆ. ಧರ್ಮವನ್ನು ಪಾಲಿಸುವವರಿಗೆ ಶಿಕ್ಷಣ ನಿರಾಕರಿಸುವುದು ಸರಿಯಲ್ಲ. ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್‌ ಧರಿಸುವ ಹಕ್ಕನ್ನೂ ಸಂವಿಧಾನವೇ ನೀಡಿದೆ” ಎಂದು ಹಿರಿಯ ಧಾರ್ಮಿಕ ವಿದ್ವಾಂಸ, ಮರ್ಕಝ್ ಶಿಕ್ಷಣ ಸಂಸ್ಥೆಗಳ ಸ್ಥಾಪಕರಾದ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

- Advertisement -

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದಕ್ಕೆ ಕರ್ನಾಟಕದ ಕೆಲ ಕಾಲೇಜುಗಳ ಆಡಳಿತ ಮಂಡಳಿ ವಿರೋಧ ವ್ಯಕ್ತಪಡಿಸುತ್ತಿರುವುದರ ಕುರಿತು ಪ್ರತಿಕ್ರಿಯಿಸಿದ ಎ.ಪಿ.ಉಸ್ತಾದ್, ಹಿಜಾಬ್‌ ಧರಿಸಿದ ವಿದ್ಯಾರ್ಥಿನಿಯರಿಗೆ ಶಾಲೆಗಳಿಗೆ ಪ್ರವೇಶ ನಿರಾಕರಿಸುತ್ತಿರುವುದು ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಈ ದೇಶದಲ್ಲಿ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳಂತೆ ಪ್ರತ್ಯೇಕಿಸುವ ಹುನ್ನಾರ ಕೆಲವರ ಮನದಲ್ಲಿ ಮೂಡಿರುವ ಕುರಿತು ಅನುಮಾನಗಳಿವೆ. ಭಾರತವು ಬಹುತ್ವ ಸಾರುವ ಜಾತ್ಯತೀತ ರಾಷ್ಟ್ರವಾಗಿದ್ದು, ಈ ಕುರಿತು ಆಳುವವರಿಗೆ ಅರ್ಥವಾಗದಿರುವುದು ವಿಪರ್ಯಾಸ” ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.



Join Whatsapp