ಹೊಸದಿಲ್ಲಿ : PNB ಬ್ಯಾಂಕ್ ಹಗರಣದ ಪ್ರಮುಖ ಆರೋಪಿಯಾಗಿರುವ ಮೆಹುಲ್ ಚೋಕ್ಸಿ ಅವರನ್ನು ಆಂಟಿಗುವಾದಿಂದ ಅಪಹರಿಸಲಾಗಿದೆ ಎಂಬ ಆರೋಪದ ತನಿಖೆ ನಡೆಸಲು ಅಲ್ಲಿನ ಪ್ರಧಾನ ಮಂತ್ರಿ ಗಸ್ಟನ್ ಬ್ರೌನ್ ಆದೇಶಿಸಿದ್ದಾರೆ.
2018ರಲ್ಲಿ ಅಂಟಿಗುವಾ ಪೌರತ್ವ ಪಡೆದು ಅಲ್ಲೇ ವಾಸಿಸುತ್ತಿರುವ ಚೋಕ್ಸಿ ಅವರನ್ನು ಅಂಟಿಗುವಾದಿಂದ ಡೊಮಿನಿಕಾಗೆ ಅಪಹರಿಸಲಾಗಿದ್ದು, ಚೋಕ್ಸಿ ಅಪಹರಣದಲ್ಲಿ ಕೆಲವರ ಕೈವಾಡವಿದೆ ಎಂದು ಅವರ ವಕೀಲ ದೂರು ನೀಡಿರುವ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸಿ ಸತ್ಯಾಂಶ ಹೊರಗೆಳೆಯುವಂತೆ ಆಂಟಿಗುವಾದ ರಾಯಲ್ ಪೊಲೀಸ್ ಫೋರ್ಸ್‍ಗೆ ಗಸ್ಟನ್ ಸೂಚನೆ ನೀಡಿದ್ದಾರೆ. ಒಂದು ವೇಳೆ ಅಪಹರಣವಾಗಿದ್ದರೆ ಅದು ಗಂಭೀರ ವಿಷಯ ಹೀಗಾಗಿ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ಗಸ್ಟನ್ ತಿಳಿಸಿದ್ದಾರೆ.
ಚೋಕ್ಸಿ ಕಳೆದ ಮೇ.23ರಂದು ನಿಗೂಢವಾಗಿ ನಾಪತ್ತೆಯಾಗಿದ್ದು, ಅವರು ತನ್ನ ಸ್ನೇಹಿತೆಯೊಂದಿಗೆ ಡೊಮಿನಿಕಾ ಪ್ರವೇಶಿಸಿದ ಆರೋಪದ ಮೇಲೆ ಬಂಧಿತರಾಗಿದ್ದರು.