ನ್ಯೂಯಾರ್ಕ್: ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ X ಮಾಲಕ ಮತ್ತು ಅಮೆರಿಕನ್ ಉದ್ಯಮಿ ಎಲೋನ್ ಮಸ್ಕ್ Xನಲ್ಲಿ ತಮ್ಮ ಯಹೂದಿ ವಿರೋಧಿ ಪೋಸ್ಟ್‌ಗಾಗಿ ಕ್ಷಮೆಯಾಚಿಸಿದ್ದಾರೆ.
ಮಸ್ಕ್ ಈ ತಿಂಗಳು ಯಹೂದಿ ವಿರೋಧಿ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. Xನಲ್ಲಿ ಹೆಚ್ಚುತ್ತಿರುವ ಯಹೂದಿ ವಿರೋಧಿ ಭಾವನೆಯಿದೆಯೆಂಬ ಆರೋಪ ವ್ಯಕ್ತವಾಗಿತ್ತು. ಇದರ ನಂತರ ಅನೇಕ ಪ್ರಮುಖ ಬ್ರಾಂಡ್ ಗಳು ಎಕ್ಸ್ ನಲ್ಲಿ ತಮ್ಮ ಜಾಹೀರಾತುಗಳನ್ನು ನಿಲ್ಲಿಸಿದವು. ಎಲಾನ್ ಮಸ್ಕ್ ಆ ಜಾಹೀರಾತುದಾರರನ್ನು ಟೀಕಿಸಿದ್ದರು.
ನ್ಯೂಯಾರ್ಕ್ ಟೈಮ್ಸ್ ಡೀಲ್ಬುಕ್ ಶೃಂಗಸಭೆಯಲ್ಲಿ ಮಾತನಾಡಿದ ಎಲೋನ್ ಮಸ್ಕ್, “ಅವರು ಜಾಹೀರಾತು ನೀಡುವುದನ್ನು ನಾನು ಬಯಸುವುದಿಲ್ಲ. ಜಾಹೀರಾತು ಅಥವಾ ಹಣದ ಮೂಲಕ ಯಾರಾದರೂ ನನ್ನನ್ನು ಬ್ಲ್ಯಾಕ್ಮೇಲ್ ಮಾಡಲು ಹೊರಟರೆ ನಡೆಯದು ಎಂದು ಹೇಳಿದ್ದರು.
ಆದರೆ ಕೊನೆಗೆ ಎಲಾನ್ ಮಸ್ಕ್ ಯಹೂದಿ ವಿರೋಧಿ ಪೋಸ್ಟ್‌ಗಾಗಿ ಕ್ಷಮೆ ಯಾಚಿಸಿದ್ದಾರೆ.