ಗಯಾ: ಸಿ.ಎ.ಎ ವಿರುದ್ಧ ಐತಿಹಾಸಿಕ ಪ್ರತಿಭಟನೆ ಆರಂಭಗೊಂಡು ಒಂದು ವರ್ಷ ಪೂರ್ಣಗೊಂಡಿರುವುದನ್ನು ಆಚರಿಸುವುದಕ್ಕಾಗಿ ಬಿಹಾರದ ಗಯಾದ ಶಾಂತಿ ಬಾಗ್ ನಲ್ಲಿ ಒಂದು ದಿನದ ಪ್ರತಿಭಟನೆ ಮತ್ತು ಉಪವಾಸ ಆಚರಿಸಲಾಯಿತು.
ಗಯಾದ ಶಾಂತಿ ಬಾಗ್ ನಲ್ಲಿ 2019ರಲ್ಲಿ ಆರಂಭವಾದ ಸಿ.ಎ.ಎ ವಿರೋಧಿ ಪ್ರತಿಭಟನೆ 84 ದಿನಗಳ ಕಾಲ ಮುಂದುವರಿದಿತ್ತು. ಆದರೆ ಕೊರೋನಾದಿಂದ ಮಾನವೀಯ ಬಿಕ್ಕಟ್ಟು ಸೃಷ್ಟಿಯಾದಾಗ ಅದನ್ನು ಅಮಾನತುಗೊಳಿಸಲಾಗಿತ್ತು.
ಸಿ.ಎ.ಎ ಇನ್ನೂ ಹಿಂಪಡೆಯಲಾಗಿಲ್ಲ ಎಂಬುದನ್ನು ಸರಕಾರಕ್ಕೆ ನೆನಪಿಸುವುದಕ್ಕಾಗಿ ಪ್ರತಿಭಟನೆ ನಡೆದಿತ್ತು. ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಅಥವಾ ಸಿ.ಎ.ಎ ಅನುಷ್ಠಾನಗೊಳಿಸುವ ಯೋಜನೆಯೊಂದಿಗೆ ಸರಕಾರ ಮುಂದುವರಿದರೆ ಶಾಂತಿ ಭಾಗ್ ನಲ್ಲಿ ಪ್ರತಿರೋಧ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಪ್ರಮಾಣ ವಚನ ಕೈಗೊಂಡರು.
ಪ್ರತಿಭಟನಾ ನಿರತ ರೈತರಿಗೆ ಬೆಂಬಲವನ್ನು ವ್ಯಕ್ತಪಡಿಸುವುದಕ್ಕಾಗಿ ಪ್ರತಿಭಟನಕಾರರು ಒಂದು ದಿನ ಉಪವಾಸ ಆಚರಿಸಿದರು.
ಸಂವಿಧಾನ್ ಬಚಾವೊ ಮೋರ್ಚಾ ದ ಬ್ಯಾನರ್ ನಡಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.