ನಾಳೆಯಿಂದಲೇ ನಿಮ್ಮ ಮೊಬೈಲ್ ಫೋನ್ ನಲ್ಲಿ ವಾಟ್ಸಪ್ ಬಂದ್ ಆಗಬಹುದು | ಯಾವೆಲ್ಲಾ ಫೋನ್ ಗಳಲ್ಲಿ ವಾಟ್ಸಪ್ ಸಿಗೋದಿಲ್ಲ ಇಲ್ಲಿ ಓದಿ!

Prasthutha|

ನವದೆಹಲಿ : 2021, ಜ.1ರಿಂದ ಐಫೋನ್ ನ ಕೆಲವು ಆವೃತ್ತಿಗಳು ಮತ್ತು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಕೆಲವು ಆವೃತ್ತಿಗಳಲ್ಲಿ ವಾಟ್ಸಪ್ ಕಾರ್ಯ ಸ್ಥಗಿತಗೊಳ್ಳಲಿದೆ.

- Advertisement -

ಹಳೆಯ ಒಎಸ್ ಆವೃತ್ತಿಯ ಫೋನ್ ಗಳಿಂದ ವಾಟ್ಸಪ್ ಹಿಂಪಡೆಯಲಾಗುತ್ತದೆ. ಈ ಆವೃತ್ತಿಗಳ ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್ ಗಳಲ್ಲಿ ನಾಳೆಯಿಂದ ವಾಟ್ಸಪ್ app ಕಾರ್ಯ ನಿರ್ವಹಿಸುವುದಿಲ್ಲ ಎಂದು ತಿಳಿದುಬಂದಿದೆ.  

ಆಂಡ್ರಾಯ್ಡ್ 4.o.3 ಆವೃತ್ತಿಯ ನಂತರದ ಆವೃತ್ತಿಗಳಲ್ಲಿ ವಾಟ್ಸಪ್ ಕಾರ್ಯ ನಿರ್ವಹಿಸುತ್ತದೆ. ಐಒಎಸ್ 9ರಲ್ಲಿ ನಡೆಯುವ ಐಫೋನ್ ಗಳು ಮತ್ತು ಹೊಸ ಐಫೋನ್ ಗಳಲ್ಲಿ ವಾಟ್ಸಪ್ ಕಾರ್ಯಾಚರಿಸುತ್ತದೆ. ಐಫೋನ್ ನ ಐಫೋನ್ 4ರ ವರೆಗಿನ ಎಲ್ಲಾ ಮಾಡೆಲ್ ಗಳು ವಾಟ್ಸಪ್ ಸಂಪರ್ಕ ಕಳೆದುಕೊಳ್ಳಲಿವೆ.

- Advertisement -

ಎಚ್ ಟಿಸಿ ಡಿಸೈರ್, ಮೊಟೊರೊಲ ಡ್ರಾಯ್ಡ್ ರೇಝರ್, ಎಲ್ ಜಿ ಆಪ್ಟಿಮಸ್ ಬ್ಲಾಕ್, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್2 ವಾಟ್ಸಪ್ ಸಂಪರ್ಕ ಕಡಿದುಕೊಳ್ಳಲಿವೆ.

ಒಎಸ್ ಪರಿಶೀಲಿಸುವುದು ಹೇಗೆ?

ಐಫೋನ್ ಗಳಲ್ಲಿ ಒಎಸ್ ಪರಿಶೀಲಿಸಲು ಫೋನ್ ನಲ್ಲಿ ಸೆಟ್ಟಿಂಗ್ಸ್ ಮೆನುಗೆ ಕ್ಲಿಕ್ ಮಾಡಿ, ಅದರಲ್ಲಿ ಜನರಲ್ ಆಂಡ್ ಇನ್ಫಾರ್ಮೇಶನ್ ಆಪ್ಶನ್ ಕ್ಲಿಕ್ ಮಾಡಿ, ಅದರಲ್ಲಿ ಸಾಫ್ಟ್ ವೇರ್ ಮತ್ತು ಯಾವ ಒಎಸ್ ನಿಮ್ಮ ಫೋನ್ ನಲ್ಲಿ ಅಳವಡಿಸಲಾಗಿದೆ ಎಂಬುದನ್ನು ಗಮನಿಸಬಹುದು.

ಆಂಡ್ರಾಯ್ಡ್ ಫೋನ್ ಇರುವವರು ನಿಮ್ಮ ಫೋನ್ ನ ಸೆಟ್ಟಿಂಗ್ಸ್ ಗೆ ಕ್ಲಿಕ್ ಮಾಡಿ, ಬಳಿಕ ಅದರಲ್ಲಿ ಫೋನ್ ಆಪ್ಶನ್ ಗೆ ಕ್ಲಿಕ್ ಮಾಡಿ, ಅದರಲ್ಲಿ ಆಂಡ್ರಾಯ್ಡ್ ವರ್ಷನ್ ಎಂದಿರುತ್ತದೆ, ಅದು ನಿಮ್ಮ ಫೋನ್ ನಲ್ಲಿ ಯಾವ ಒಎಸ್ ಅಳವಡಿಸಲಾಗಿದೆ ಎಂಬುದನ್ನು ತೋರಿಸುತ್ತದೆ.

Join Whatsapp