ನೆಟ್ ಫ್ಲಿಕ್ಸ್ ಮಾದರಿಯ ಮತ್ತೊಂದು ಓಟಿಪಿ ಪ್ಲಾಟ್ ಫಾರ್ಮ್ ಪ್ರಾರಂಭ

Prasthutha|

ಬೆಂಗಳೂರು: ರಿಯಾಲಿಟಿ ಶೋ, ವೆಬ್‌ ಸೀರಿಸ್ ನೋಡುವ ಹವ್ಯಾಸ ಇರುವವರಿಗೆ ನೆಟ್‌ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮಾದರಿಯ ಮತ್ತೊಂದು ಓಟಿಪಿ ಫ್ಲಾಟ್‌ ಫಾರ್ಮ್ ಭಾರತದಲ್ಲಿ ಪ್ರಾರಂಭಗೊಂಡಿದೆ.

- Advertisement -

ಹೇಯು (Hayu)ಹೆಸರಿನ ಈ ಪ್ಲಾಟ್‌ ಫಾರ್ಮ್ ಈಗ ಭಾರತದಲ್ಲಿಯೂ ತನ್ನ ಸ್ಟ್ರೀಮಿಂಗ್ ಆರಂಭಿಸಿದೆ. ಹೇಯು ಈಗಾಗಲೇ 27 ದೇಶಗಳಲ್ಲಿ ತನ್ನ ಸೇವೆಯನ್ನು ನೀಡುತ್ತಿದ್ದು, ಅತ್ಯಂತ ಜನಪ್ರಿಯಾ ಓಟಿಪಿ ಪ್ಲಾಟ್‌ ಫಾರ್ಮ್ ಆಗಿ ರೂಪುಗೊಂಡಿದೆ. ಇದೀಗ ಭಾರತದಲ್ಲಿ ತನ್ನ ಸೇವೆ ಪ್ರಾರಂಭಿಸಿದೆ. ಹೇಯು ಅತಿ ಹೆಚ್ಚಾಗಿ ರಿಯಾಲಿಟಿ ಶೋಗಳಿಗೆ ಆದ್ಯತೆ ನೀಡುತ್ತಿದೆ. ಭಾರತದಲ್ಲಿ ರಿಯಾಲಿಟಿ ಶೋಗಳಿಗೆ ಹೆಚ್ಚು ಮನ್ನಣೆ ಇದೆ. ಹೀಗಾಗಿ ಜನರನ್ನು ರಂಜಿಸುವ ಉದ್ದೇಶದಿಂದ ಕೆಲವು ಜನಪ್ರಿಯ ರಿಯಾಲಿಟಿ ಶೋಗಳನ್ನು ಹೇಯುನಲ್ಲಿ ಪ್ರಸಾರ ಮಾಡಲಾಗುವುದು.

ದಿ ರಿಯಲ್ ಹೌಸ್‌ ವೇವ್ಸ್, ಫ್ಯಾಮಿಲಿ ಕರ್ಮಾ ಇತ್ಯಾದಿ ಇಂಗ್ಲಿಷ್ ಭಾಷೆಯ ರಿಯಾಲಿಟಿ ಶೂಗಳು ಪ್ರಾಸರಗೊಳ್ಳಲಿದೆ. ಪ್ರಸ್ತುತ ಇಂಗ್ಲಿಷ್ ಭಾಷೆಯಲ್ಲಿ ಈ ಓಟಿಪಿ ಇರಲಿದ್ದು, ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳ ರಿಯಾಲಿಟಿ ಶೋ ಹಾಗೂ ವೆಬ್‌ಸೀರಿಸ್ ಪ್ರಾರಂಭಿಸುವುದಾಗಿ ಹೇಯು ಡೈರೆಕ್ಟರ್ ಹೆಂಡ್ರಿಕ್ ಮೆಕ್‌ಡರ್ಮಾಟ್ ಹೇಳಿದ್ದಾರೆ

Join Whatsapp