ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ನಡೆದ ಅವಘಡದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಅವಂತಿಕಾ ನಾಯ್ಕ (6) ಮತ್ತು ಟ್ಯಾಂಕರ್ ಚಾಲಕನ ಮೃತದೇಹ ಗಂಗಾವಳಿ ನದಿಯಲ್ಲಿ ಗುರುವಾರ ಬೆಳಗಿನ ಜಾವ ಪತ್ತೆಯಾಗಿದೆ.
ಬಾಲಕಿಯ ಮೃತದೇಹ ಗೋಕರ್ಣ ಸಮೀಪ ಗಂಗೆಕೊಳ್ಳದಲ್ಲಿ ದೊರೆತಿದೆ. ಘಟನೆ ನಡೆದ ಸ್ಥಳದ ಸಮೀಪದಲ್ಲಿಯೇ ನದಿಗೆ ಬಿದ್ದಿರುವ ಮಣ್ಣಿನ ರಾಶಿ ಬಳಿ ಚಾಲಕನ ಮೃತದೇಹ ಸಿಕ್ಕಿದೆ.
ಒಟ್ಟು ಆರು ಮಂದಿ ಸಾವನ್ನಪ್ಪಿದಂತಾಗಿದ್ದು, ಇನ್ನೂ ಸ್ಥಳೀಯ ಮೂವರು ಸೇರಿದಂತೆ ಇನ್ನಷ್ಟು ಜನ ಕಣ್ಮರೆಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಶೋಧ ಕಾರ್ಯ ಮುಂದುವರೆಸಲಾಗಿದೆ.