ಮಡಿಕೇರಿ | ಮಹಿಳಾ ಹಾಕಿ ತಂಡದ ಸಹಾಯಕ ಕೋಚ್ ಆಗಿ ಕಾರ್ಯನಿರ್ವಹಿಸಲಿರುವ ಅಂಕಿತಾ ಸುರೇಶ್

Prasthutha|

ಮಡಿಕೇರಿ: ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಡೆಯಲಿರುವ ಏಷ್ಯನ್ ಚಾಂಪಿಯನ್ ಷಿಪ್ ಟ್ರೋಫಿ ಮಹಿಳಾ ಹಾಕಿ ಪಂದ್ಯಾವಳಿಯ ಭಾರತ ತಂಡದ ಸಹಾಯಕ ಕೋಚ್ ಆಗಿ ಕೊಡಗು ಜಿಲ್ಲೆ ಕಂಬಿಬಾಣೆಯ ಅಂಕಿತಾ ಸುರೇಶ್ ಕಾರ್ಯ ನಿರ್ವಹಿಸಲಿದ್ದಾರೆ. ಇವರು ಸಹಾಯಕ ಕೋಚ್ ಜವಾಬ್ದಾರಿಯೊಂದಿಗೆ ತಂಡದ ಮ್ಯಾನೇಜರ್ ಆಗಿ ಕೂಡ ಉಸ್ತುವಾರಿ ವಹಿಸಲಿದ್ದಾರೆ.

- Advertisement -


ಟೋಕಿಯೋ ಒಲಂಪಿಕ್ಸ್ ನಂತರ ಭಾರತ ಸೀನಿಯರ್ ಮಹಿಳಾ ಹಾಕಿ ತಂಡವು ಇದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿರುವ ಅಂತಾರಾಷ್ಟ್ರೀಯ ಪಂದ್ಯಾವಳಿ ಇದಾಗಿದೆ. ಡಿಸೆಂಬರ್ 5 ರಿಂದ 12ರ ವರೆಗೆ ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ಏರ್ಪಟ್ಟಿರುವ ಏಷ್ಯನ್ ಚಾಂಪಿಯನ್ ಶಿಪ್ ಟ್ರೋಫಿಯ ಹಣಾಹಣಿಯಲ್ಲಿ ಭಾರತ ಮಹಿಳಾ ತಂಡವು ಹಾಕಿ ಕ್ರೀಡೆಯ ಚಾಕಚಕ್ಯತೆಯನ್ನು ಪ್ರದರ್ಶಿಸಲಿದೆ.


ಈಗಾಗಲೇ ಭಾರತ ಮಹಿಳಾ ಹಾಕಿ ತಂಡವು ಸಿಯೋಲ್ ಗೆ ತಲುಪಿದೆ. ಹಾಕಿ ಕ್ಷೇತ್ರದಲ್ಲಿ ರಾಷ್ಟ್ರದ ಚಿತ್ತವನ್ನು ಕೊಡಗಿನತ್ತ ತಿರುಗಿಸುವಂತೆ ಮಾಡಿರುವ ಸಹಾಯಕ ಕೋಚ್ ಅಂಕಿತಾ ಸುರೇಶ್ ಉದ್ಯಮಿ ಹೊನ್ನಂಪಾಡಿ ಸುರೇಶ್ ಕುಶಾಲಪ್ಪ ಪತ್ನಿಯಾಗಿದ್ದಾರೆ. ಕ್ಯೂಟ್ ಕೂರ್ಗ್ ನ್ಯೂಸ್ ಬಳಗದ ಎಡ್ಮಿನ್ ಆಗಿರುವ ಹಾಕಿ ಪ್ರತಿಭೆ ಅಂಕಿತಾ ಸುರೇಶ್ ಅವರ ಸಹಾಯಕ ಕೋಚಿಂಗ್ ಹಾಗೂ ಮ್ಯಾನೇಜ್ ಮೆಂಟ್ ಕಾರ್ಯನಿವಹಿಸಲಿದ್ದಾರೆ.

Join Whatsapp