ಸಿಂಗ್ ಬಿಗಿ ಪಟ್ಟು: ಬೊಮ್ಮಾಯಿಗೆ ಇಕ್ಕಟ್ಟು

Prasthutha|

ಬೆಂಗಳೂರು: ಖಾತೆ ಹಂಚಿಕೆ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ವಿಜಯನಗರದ ಆನಂದ್ ಸಿಂಗ್ ಇದೀಗ ತಮಗೆ ಲೋಕೋಪಯೋಗಿ ಇಲ್ಲವೆ ಇಂಧನ ಖಾತೆ ಬೇಕೆಂದು ಪಟ್ಟು ಹಿಡಿಸಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ನಿಭಾಯಿಸಿದ್ದ ಪ್ರವಾಸೋದ್ಯಮ ಖಾತೆ ಬಗ್ಗೆ ಸಿಂಗ್ ಗೆ ಒಲವಿಲ್ಲ. ಬದಲಿಗೆ ಅವರು ನಿರ್ವಹಿಸಿದ ಖಾತೆಗಿಂತ ಪ್ರಬಲ ಖಾತೆ ಬೇಕು ಎಂಬು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅವರು ಇಂಧನ, ಪಿ.ಡಬ್ಲ್ಯೂ.ಡಿ ಇಲ್ಲವೆ ಅರಣ್ಯ ಖಾತೆ ಮೇಲೆ ಕಣ್ಣು ಹಾಕಿದ್ದಾರೆ.

- Advertisement -


ಅರಣ್ಯ ಖಾತೆಯ ಹೊಣೆಯನ್ನು ಬೆಳಗಾವಿಯ ಉಮೇಶ್ ಕತ್ತಿ ಅವರಿಗೂ, ಪಿ.ಡಬ್ಲ್ಯೂ,ಡಿ ಸಿ.ಸಿ ಪಾಟೀಲ್, ಇಂಧನ ಖಾತೆಯ ಹೊಣೆಯನ್ನು ಸುನಿಲ್ ಕುಮಾರ್ ಅವರಿಗೂ ಈಗಾಗಲೇ ಹಂಚಿಕೆ ಮಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಆನಂದ್ ಸಿಂಗ್ ಅರಣ್ಯ ಖಾತೆ ಪಡೆದುಕೊಂಡಿದ್ದರು ಈಗಲೂ ಅದೇ ಖಾತೆಗಾಗಿ ಪಟ್ಟು ಬಿಗಿಪಟ್ಟು ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ.


ಇಂದು ಈ ಕುರಿತು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಭಾವನಾತ್ಮಕ ಕಾರಣಗಳಿಗಾಗಿ ಸಿಂಗ್ ಈ ನಿರ್ಧಾರಕ್ಕೆ ಬಂದಿರಬಹುದು. ಮಾತುಕತೆ ನಡೆಸಿದರೆ ಎಲ್ಲವೂ ತಿಳಿಯಾಗಲಿದೆ. ನಾಳೆ ಮಂಗಳೂರು ಪ್ರವಾಸ ಕಾರ್ಯಕ್ರಮವಿರುವುದರಿಂದ ಸಚಿವ ಆನಂದ್ ಸಿಂಗ್ ಇಂದೇ ಮಾತುಕತೆಗೆ ಬರಬಹುದು ಎಂದು ಹೇಳಿದ್ದಾರೆ.

- Advertisement -


ಕಳೆದ 26 ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಹಿಡಿದ ನಂತರ ಜುಲೈ 28ರಂದು ಬಸವರಾಜ ಬೊಮ್ಮಾಯಿ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು. ನಂತರ ಆಗಸ್ಟ್ 4 ರಂದು ಸಂಪುಟ ವಿಸ್ತರಣೆ ಮಾಡಿ 29 ಹೊಸ ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಈ ನಡುವೆ ಸಂಪುಟದಲ್ಲಿ ಅವಕಾಶ ಸಿಗದ ಅನೇಕ ಬಿಜೆಪಿ ಶಾಸಕರು ಅತೃಪ್ತಿ, ಅಸಮಾಧಾನ ಹೊರಹಾಕುತ್ತಿದ್ದಾರೆ. ಅಲ್ಲಿ ಪ್ರಮುಖರೆಂದರೆ ಮೈಸೂರಿನ ಎಸ್. ಎ ರಾಮದಾಸ್, ಬೆಳಗಾವಿಯ ರಮೇಶ್ ಜಾರಕಿಹೊಳಿ, ಅಭಯ್ ಪಾಟೀಲ್ , ರಾಜುಗೌಡ, ರೇಣುಕಾಚಾರ್ಯ ಅರವಿಂದ ಬೆಲ್ಲದ, ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ಮೊದಲಾದ ಶಾಸಕರು ಸಚಿವ ಸ್ಥಾನ ಸಿಗದೇ ಇರುವ ಕಾರಣಕ್ಕಾಗಿ ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

Join Whatsapp