ತುಮಕೂರು ಮಹೀಂದ್ರಾ ಶೋರೂಮ್’ನಲ್ಲಿ ರೈತನಿಗೆ ಅವಮಾನ ವಿಚಾರ; ಟ್ವಿಟರ್’ನಲ್ಲಿ ಆನಂದ್ ಮಹೀಂದ್ರಾ ಪ್ರತಿಕ್ರಿಯೆ

Prasthutha|

ನವದೆಹಲಿ; ದೇಶಾದ್ಯಂತ ಭಾರಿ ಸುದ್ದಿಯಾದ ಮಹೀಂದ್ರಾ ಕಾರು ಶೋರೋಮ್’ನಲ್ಲಿ ರೈತನಿಗೆ ಅವಮಾನ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಮಹೀಂದ್ರಾ & ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

“ಎಲ್ಲಾ ವ್ಯಕ್ತಿಗಳ ಘನತೆ ಎತ್ತಿ ಹಿಡಿಯುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನಮ್ಮ ಸಮುದಾಯಗಳು ಮತ್ತು ಎಲ್ಲಾ ಪಾಲುದಾರರಿಗೆ ಶಕ್ತಿ ತುಂಬುವುದು ಮಹೀಂದ್ರಾ ಕಂಪನಿಯ ಪ್ರಮುಖ ಮೌಲ್ಯವಾಗಿದೆ. ಈ ನಿರ್ಧಾರಗಳಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲು ಸಾಧ್ಯವಿಲ್ಲ. ಈ ನೀತಿಗಳಿಗೆ ವಿರುದ್ಧವಾಗಿ ನಡೆಯುವ ಬೆಳವಣಿಗೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ” ಎಂದು ಟ್ವೀಟ್’ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಂಪನಿಯ ಸಿಇಒ ವಿಜಯ್​ ನಕ್ರಾ “ಗ್ರಾಹಕರಿಗೆ ಉತ್ತಮವಾದ ಸೇವೆ ಒದಗಿಸಬೇಕು. ಅವರನ್ನ ಗೌರವ ಮತ್ತು ಘನತೆಯಿಂದ ಕಾಣಬೇಕು ಎಂಬುದು
ನಿಯಮವಾಗಿದೆ. ತುಮಕೂರಿನಲ್ಲಿ ನಡೆದ ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದಿದ್ದಾರೆ.

- Advertisement -

ಏನಿದು ಘಟನೆ ?

ರೈತನೋರ್ವ ಕಾರು ಖರೀದಿಸಲು ಮಹೀಂದ್ರಾ ಕಂಪನಿಯ ಶೋರೂಮ್​ಗೆ ತೆರಳಿದ್ದ ವೇಳೆ, ರೈತ ಧರಿಸಿದ್ದ ಬಟ್ಟೆ ನೋಡಿ ಕಾರು ಶೋರೂಮ್​ ಸಿಬ್ಬಂದಿ ಹೀಯಾಳಿಸಿ ಕಳುಹಿಸಿದ್ದ ಘಟನೆ ತುಮಕೂರಿನಲ್ಲಿ ಇತ್ತೀಚಿಗೆ ನಡೆದಿತ್ತು. ಇದರ ಬೆನ್ನಲ್ಲೇ ಅವಮಾನಕ್ಕೊಳಗಾಗಿದ್ದ ರೈತ ಗ್ರಾಹಕ, ಒಂದೇ ತಾಸಲ್ಲಿ 10 ಲಕ್ಷ ರೂಪಾಯಿಯನ್ನು ತೆಗೆದುಕೊಂಡು ಶೋರೂಮ್’ಗೆ ತೆರಳಿ ಕೂಡಲೇ ಕಾರು ನೀಡುವಂತೆ ಪಟ್ಟು ಹಿಡಿದಿದ್ದ. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು.

ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದಂತೆ ಹಲವು ಮಂದಿ ನೆಟ್ಟಿಗರು ಕಂಪನಿಯ ಸಿಇಒ ವಿಜಯ್ ನಕ್ರಾ ಹಾಗೂ ಅಧ್ಯಕ್ಷ ಆನಂದ್ ಮಹೀಂದ್ರಾ ಅವರಿಗೆ ಟ್ಯಾಗ್​ ಮಾಡಿದ್ದರು.



Join Whatsapp