‘ಅಗ್ನಿವೀರ’ರಿಗೆ ಉದ್ಯೋಗ ನೀಡುವುದಾಗಿ ಆಫರ್ ಕೊಟ್ಟ ಆನಂದ್ ಮಹೀಂದ್ರಾ

Prasthutha|

ನವದೆಹಲಿ: ಅಗ್ನಿಪಥ್ ಯೋಜನೆಯಡಿ ನೇಮಕಗೊಳ್ಳುವ ಅಗ್ನಿವೀರರಿಗೆ ನಾಲ್ಕು ವರ್ಷಗಳ ಸೇವೆಯ ನಂತರ ತಮ್ಮ ಕಂಪನಿಗಳಲ್ಲಿ ಉದ್ಯೋಗ ಅವಕಾಶ ನೀಡುವುದಾಗಿ ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ತಿಳಿಸಿದ್ದಾರೆ.

- Advertisement -


ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಗ್ನಿಪಥ್ ಯೋಜನೆ ಘೋಷಣೆಯ ನಂತರ ನಡೆಯುತ್ತಿರುವ ಹಿಂಸಾಚಾರದಿಂದ ನನಗೆ ಬೇಸರವಾಗಿದೆ. ಕಳೆದ ವರ್ಷ ಈ ಯೋಜನೆಯನ್ನು ಪರಿಗಣಿಸಿದಾಗ, ಅಗ್ನಿವೀರರಿಗೆ ಸಿಗುವ ಶಿಸ್ತು ಮತ್ತು ಕೌಶಲ್ಯಗಳು ಅವನನ್ನು ಗಮನಾರ್ಹವಾಗಿ ಉದ್ಯೋಗಿಯನ್ನಾಗಿ ಮಾಡುತ್ತದೆ ಎಂದು ನಾನು ಹೇಳಿದ್ದೆ. ಮಹೀಂದ್ರಾ ಗ್ರೂಪ್ ಅಂತಹ ತರಬೇತಿ ಪಡೆದ ಸಮರ್ಥ ಯುವಕರಿಗೆ ನೇಮಕಾತಿ (ಉದ್ಯೋಗ) ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.

Join Whatsapp