ಗುಜರಾತ್ ಗಲಭೆ, ಬಿಬಿಸಿ ಸಾಕ್ಷ್ಯ ಚಿತ್ರದ ಬಗ್ಗೆ ಅಮೆರಿಕ ಹೇಳಿದ್ದೇನು?

Prasthutha|

ವಾಷಿಂಗ್ಟನ್: “ನೀವು ಹೇಳುವ ಸಾಕ್ಷ್ಯ ಚಿತ್ರ ನಾನು ನೋಡಿಲ್ಲ. ಯುಎಸ್’ಎ ಮತ್ತು ಭಾರತಗಳ ನಡುವೆ ಆಳವಾದ ಪ್ರಜಾಸತ್ತಾತ್ಮಕ ಸಂಬಂಧಗಳಿವೆ” ಎಂದು ವಾಷಿಂಗ್ಟನ್ ಶ್ವೇತಭವನದ ವಕ್ತಾರ ನೆಡ್ ಪ್ರೈಸ್ ಪ್ರತಿಕ್ರಿಯಿಸಿದ್ದಾರೆ.


ಗುಜರಾತ್ ಗಲಭೆ, ಮೋದಿಯ ಬಗ್ಗೆ ಬಿಬಿಸಿ ಸಾಕ್ಷ್ಯ ಚಿತ್ರ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ನೆಡ್ ಈ ಪ್ರತಿಕ್ರಿಯೆ ನೀಡಿದರು.
ಭಾರತದೊಂದಿಗೆ ಯುಎಸ್ ಮುಖ್ಯವಾಗಿ ರಾಜತಾಂತ್ರಿಕ, ಹಣಕಾಸು ಮತ್ತು ಜನರಿಂದ ಜನರಿಗೆ ಆಳವಾದ ಸಂಬಂಧ ಹೊಂದಿದೆ ಎಂದೂ ಅವರು ಹೇಳಿದರು.

- Advertisement -


ಕಳೆದ ವಾರ ಬ್ರಿಟನ್ ಪ್ರಧಾನಿ ಸುನಕ್ ಸಹ ಬಿಬಿಸಿ ಸಾಕ್ಷ್ಯ ಚಿತ್ರದ ಬಗ್ಗೆ ಕೇಳಿದಾಗ ಭಾರತದ ಪ್ರಜಾಪ್ರಭುತ್ವ ಮತ್ತು ಮೋದಿಯವರನ್ನು ಸಮರ್ಥಿಸಿಕೊಂಡಿದ್ದರು.
2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ಮೋದಿಯವರು ರಕ್ತಪಾತದ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಪೋಲೀಸರನ್ನು ತಡೆದರು; ಮೊದಲಾದ ವಿಷಯವನ್ನು ಒಳಗೊಂಡಂತೆ ಬಿಬಿಸಿ ಎರಡು ಕಂತುಗಳಲ್ಲಿ ಗುಜರಾತ್ ಗಲಭೆ ಬಗ್ಗೆ ಸಾಕ್ಷ್ಯ ಚಿತ್ರ ನಿರ್ಮಿಸಿತ್ತು.
ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿಯವರು ಅವು ಪ್ರಚಾರದ ಸರಕುಗಳು ಎಂದಿದ್ದಾರೆ.


ಬ್ರಿಟನ್ನಿನ ಮಾಜಿ ಕಾರ್ಯದರ್ಶಿ ಜಾಕ್ ಸ್ಟ್ರಾ ಅವರು ಸಾಕ್ಷ್ಯ ಚಿತ್ರ ಸತ್ಯ ಚಿತ್ರ ಎಂದರೆ ಅದನ್ನು ಸ್ವಾಗತಿಸಿದವರು, ವಿರೋಧಿಸಿದವರು ಎಲ್ಲೆಡೆ ಇದ್ದಾರೆ. ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರರು 20 ವರ್ಷದ ಕತೆ ಈಗೇಕೆ ಎಂದಿದ್ದು ಕೂಡ ಟೀಕೆಗೆ ಒಳಗಾಗಿದೆ.
ಏಷ್ಯಾದಲ್ಲಿ ಪ್ರಾದೇಶಿಕ ಸಮತೋಲನ ಕಾಯ್ದುಕೊಳ್ಳಲು ಭಾರತದೊಡನೆ ಉತ್ತಮ ಸಂಬಂಧ ಅಗತ್ಯ ಎಂಬ ನಿಲುವನ್ನು ಯುಎಸ್’ಎ ಮತ್ತು ಬ್ರಿಟನ್ ಮುಖ್ಯವಾಗಿ ಪ್ರಕಟಿಸಿವೆ.

- Advertisement -