ದುಬೈಯಲ್ಲಿ ಅತಿ ದುಬಾರಿ ಮನೆ ಖರೀದಿಸಿದ ಅಂಬಾನಿ ಮಗ ಅನಂತ ಅಂಬಾನಿ

Prasthutha|

ದುಬೈ: ಖ್ಯಾತ ಉದ್ಯಮ ಮುಕೇಶ್ ಅಂಬಾನಿಯವರ ಕೊನೆಯ ಮಗ ಅನಂತ ಅಂಬಾನಿ ದುಬೈಯಲ್ಲಿ 8 ಕೋಟಿ ಡಾಲರ್ ಬೆಲೆಗೆ ಬೀಚ್ ಬದಿಯ ಮನೆಯೊಂದನ್ನು ಖರೀದಿಸಿದ್ದಾರೆ.

- Advertisement -

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಾರತೀಯರೊಬ್ಬರು ಖರೀದಿಸಿದ ಅತಿ ದುಬಾರಿಯ ಮನೆ  ಎಂದು ಬಣ್ಣಿಸಲಾಗಿದೆ. ದುಬೈಯ ಪಾಮ್ ಜುಮೇರಾ ಬಳಿ ಈ ಮನೆಯಿದೆ.

ತಾಳೆ ಮಾದರಿಯ ಕೃತಕ ದ್ವೀಪಗಳ ಮಾಲೆಗೆ ಹತ್ತಿರದ ಉತ್ತರ ಭಾಗದಲ್ಲಿ ಈ ಬಂಗಲೆ ಇರುವುದಾಗಿ ಬ್ಲೂಂಬರ್ಗ್ ವರದಿ ಮಾಡಿದೆ. ಇದು ಹತ್ತು ಬೆಡ್ ರೂಮುಗಳನ್ನು ಹೊಂದಿದ್ದು, ಒಂದು ಖಾಸಗಿ ಸ್ಪಾ ಮತ್ತು ಒಳಾಂಗಣ ಮತ್ತು ಹೊರಾಂಗಣ ಈಜುಕೊಳಗಳನ್ನು ಒಳಗೊಂಡಿವೆ.

- Advertisement -

ರಿಲೈಯೆನ್ಸ್ ನ ಹೊರ ದೇಶದ ವ್ಯವಹಾರ ಘಟಕವು ಈ ಮನೆಯ ನಿರ್ವಹಣೆಯನ್ನು ವಹಿಸಿಕೊಂಡಿವೆ ಎಂದು ತಿಳಿದು ಬಂದಿದೆ. ಇದನ್ನು ಅಂಬಾನಿಯವರಿಗೆಂದೇ ಮೀಸಲಿಡಲಾಗಿದ್ದು, ಭಾರೀ ಭದ್ರತೆಯ ವ್ಯವಸ್ಥೆಯನ್ನು ಈ ಮನೆಗೆ ಮಾಡಲಾಗಿದೆ.

ಸಂಸದ ಹಾಗೂ ಅಂಬಾನಿಯವರ ದೀರ್ಘ ಕಾಲದ ವ್ಯವಹಾರಿ ಮತ್ತು ಉದ್ಯಮ ಸಂಬಂಧಿ ನಿರ್ದೇಶಕರೂ ಆಗಿರುವ ಪರಿಮಾಲ್ ನಾತ್ವಾನಿ ಈ ಬಂಗಲೆಯ ನಿರ್ವಹಣೆ ವಹಿಸಿಕೊಂಡಿರುವುದಾಗಿಯೂ ವರದಿಯಾಗಿದೆ.

ಅನಂತ ಅಂಬಾನಿಯು ಈಗ ಬಾಲಿವುಡ್ ತಾರೆ ಶಾರುಕ್ ಖಾನ್ ಹಾಗೂ ಫುಟ್ಬಾಲ್ ತಾರೆ ಡೇವಿಡ್ ಬೆಕ್ಹಾಮ್ ರ ನೆರೆಹೊರೆ ಆಗಿದ್ದಾರೆ ಎಂದೂ ತಿಳಿದು ಬಂದಿದೆ.

Join Whatsapp