ಭಾರತ ಸರಕಾರ ಕೆಲಸ ಮಾಡುವ ಬದಲು ಕ್ರೆಡಿಟ್‌ ತೆಗೆದುಕೊಳ್ಳಲು ಯತ್ನಿಸಿದುದೇ ಕೋವಿಡ್‌ ಸೋಂಕು ಉಲ್ಬಣಗೊಳ್ಳಲು ಕಾರಣ : ಅಮರ್ತ್ಯಸೇನ್‌

Prasthutha|

ಮುಂಬೈ : ಭಾರತದ ʼಗೊಂದಲಮಯʼ ಸರಕಾರ, ಕೋವಿಡ್‌ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುವ ಬದಲು, ತಾನು ಕೈಗೊಂಡ ಕ್ರಮಗಳ ಕ್ರೆಡಿಟ್ ತಾನೇ ತೆಗೆದುಕೊಳ್ಳಲು ಯತ್ನಿಸಿದ ಪರಿಣಾಮವಾಗಿ, ಹಲವಾರು ಸಮಸ್ಯೆಗಳಿಗೆಡೆ ಮಾಡಿದ ಮನೋವ್ಯಾದಿಗೆ ಕಾರಣವಾಗಿದೆ ಎಂದು ನೊಬೆಲ್‌ ಪುರಸ್ಕೃತ ಖ್ಯಾತ ಅರ್ಥಶಾಸ್ತ್ರಜ್ಞ ಅಮರ್ತ್ಯಸೇನ್‌ ಹೇಳಿದ್ದಾರೆ. ರಾಷ್ಟ್ರ ಸೇವಾ ದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾಈ ವಿಷಯ ತಿಳಿಸಿದ್ದಾರೆ.

- Advertisement -

ದೇಶದ ಔಷಧ ಉತ್ಪಾದನಾ ಉದ್ಯಮ ಸಾಕಷ್ಟು ಪ್ರಬಲವಾಗಿರುವುದರಿಂದ ಮತ್ತು ಭಾರತೀಯರಿಗಿರುವ ಉತ್ಕೃಷ್ಟ ಗುಣಮಟ್ಟದ ಇಮ್ಯುನಿಟಿ ಶಕ್ತಿಯನ್ನು ಬಳಸಿಕೊಂಡು ಕೋವಿಡ್‌ ಸೋಂಕಿನ ವಿರುದ್ಧ ಭಾರತ ಚೆನ್ನಾಗಿ ಹೋರಾಡಬಹುದಿತ್ತು ಎಂದು ಅವರು ಹೇಳಿದ್ದಾರೆ.

ಕೋವಿಡ್‌ ಸೋಂಕು ತಡೆಗಟ್ಟಲು ಭಾರತ ಸರಕಾರ ತನ್ನ ಸಾಮರ್ಥ್ಯ ತೋರ್ಪಡಿಸಲು ವಿಫಲವಾದುದೇ ಇಷ್ಟೆಲ್ಲಾ ಅನಾಹುತಗಳಿಗೆ ಕಾರಣ ಎಂದು ಸೇನ್‌ ಅಭಿಪ್ರಾಯ ಪಟ್ಟಿದ್ದಾರೆ.

Join Whatsapp