ಶ್ರೀನಗರ: ಅಮರನಾಥ ದೇವಾಲಯದ ಬಳಿ ಶುಕ್ರವಾರ ರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಇದುವರೆಗೆ 15 ಜನರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಬೇಸ್ ಕ್ಯಾಂಪ್ ಬಲ್ಟಾಲ್ ನಲ್ಲಿ ಮೇಘಸ್ಫೋಟದಿಂದಾಗಿ ನೆರೆ ನೀರಿಗೆ ಮೂರು ಸಮುದಾಯ ಪಾಕಶಾಲೆಗಳು ಮತ್ತು 25 ಡೇರೆಗಳು ಕೊಚ್ಚಿಕೊಂಡು ಹೋಗಿವೆ. ಕೋವಿಡ್ ನಿಂದ ಎರಡು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಈ ವರ್ಷದ ಬೇಸಿಗೆಯಲ್ಲಷ್ಟೇ ಆರಂಭವಾಗಿತ್ತು.
ಜಮ್ಮು ಮತ್ತು ಕಾಶ್ಮೀರ ಪೊಲೀಸರು ಹಾಗೂ ಸೇನಾ ಘಟಕಗಳು ಪರಿಹಾರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮಳೆ ನಿಂತ ಬಳಿಕ ಅವಶೇಷಗಳ ಗುಡ್ಡಗಳಡಿ ಸಿಕ್ಕಿಹಾಕಿಕೊಂಡಿರುವವರ ತೆರವಿಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಹೆಲಿಕಾಪ್ಟರ್ ಗಳನ್ನು ಬಳಸಲಾಗುತ್ತಿದೆ.