ಹೊಸದಿಲ್ಲಿ: ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಜತೆಗಿನ ಮೈತ್ರಿಯನ್ನು ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಶುಕ್ರವಾರ ಘೋಷಿಸಿದ್ದಾರೆ.. ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಿದರೆ ಮೈತ್ರಿ ಮಾಡಿಕೊಳ್ಳುವುದಾಗಿ ಅವರು ಬಿಜೆಪಿ ನಾಯಕತ್ವಕ್ಕೆ ಷರತ್ತು ಹಾಕಿದ್ದರು. ಪಂಜಾಬ್ ಚುನಾವಣೆಯಲ್ಲಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಏಕೈಕ ಆಧಾರವಾಗಿರುವ ಅಮರಿಂದರ್ ಸಿಂಗ್ ಜತೆಗಿನ ಮೈತ್ರಿಯನ್ನು ಬಿಜೆಪಿ ಇದೀಗ ಅಲ್ಲಗೆಲೆಯದೆ ಮೈತ್ರಿಗೆ ಮುಂದಾಗಿದೆ. ಶುಕ್ರವಾರ ಅಮರಿಂದರ್ ಸಿಂಗ್ ದಿಲ್ಲಿಯಲ್ಲಿ ಬಿಜೆಪಿ ನಾಯಕತ್ವದ ಜೊತೆ ಸಭೆ ನಡೆಸಿ ಮೈತ್ರಿ ಬಗ್ಗೆ ಅಧಿಕೃತ ಘೋಷಣೆಯನ್ನು ಮಾಡಿದ್ದಾರೆ.
ನಮ್ಮ ಮೈತ್ರಿಯು ಬಿಜೆಪಿಯೊಂದಿಗೆ ಖಚಿತವಾಗಿದೆ. ಈಗ ಸೀಟು ಹಂಚಿಕೆ ಮಾತುಕತೆಗಳು ಮಾತ್ರ ನಡೆಯುತ್ತಿವೆ. ಯಾರು, ಎಲ್ಲಿಂದ ಸ್ಪರ್ಧಿಸುತ್ತಾರೆ ಎಂಬುದನ್ನು ನಾವು ನೋಡಬೇಕಿದೆ. ಗೆಲುವು ಸಾಧಿಸುವ ಸಾಮರ್ಥ್ಯವೇ ಕ್ಷೇತ್ರಗಳಲ್ಲಿನ ನಮ್ಮ ಆಯ್ಕೆಯ ಮಾನದಂಡವಾಗಿದೆ’ ಎಂದು ಅಮರಿಂದರ್ ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮರಿಂದರ್ ಸಿಂಗ್ ಗಜೇಂದ್ರ ಸಿಂಗ್ ಶೆಖಾವತ್ ಅವರನ್ನು ಹೊಸದಿಲ್ಲಿಯಲ್ಲಿ ಭೇಟಿ ಮಾಡಿ ಮುನ್ನ ಪಂಜಾಬ್ ವಿಧಾನಸಭೆ ಚುನಾವಣೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದ್ದೇನೆ. 2022ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಬಿಜೆಪಿ ಜತೆ ಸೀಟು ಹೊಂದಾಣಿಕೆಯ ಔಪಚಾರಿಕ ಘೋಷಣೆಯನ್ನು ಮಾಡಿದ್ದೇವೆ’ ಎಂದು ಹೇಳಿದ್ದಾರೆ.