ಇಬ್ಬರು ಒಪ್ಪಿತ ವಯಸ್ಕ ಜೋಡಿ ಜೊತೆಯಾಗಿ ವಾಸಿಸಬಹುದು : ಅಲಹಾಬಾದ್ ಹೈಕೋರ್ಟ್

Prasthutha|

ಲಖನೌ : ಇಬ್ಬರು ಒಪ್ಪಿತ ವಯಸ್ಕರು ತಮ್ಮ ಕುಟುಂಬದ ಯಾವುದೇ ಮಧ್ಯಪ್ರವೇಶಿಕೆ ಇಲ್ಲದೆ ಜೊತೆಯಾಗಿ ವಾಸಿಸುವ ಹಕ್ಕು ಹೊಂದಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಭಾರತೀಯ ಸಂಪ್ರದಾಯದಲ್ಲಿ ‘ಲಿವ್ ಇನ್ ರಿಲೇಶನ್ ಶಿಪ್ (ಜೊತೆಯಾಗಿ ವಾಸಿಸುವ ಸಂಬಂಧ)’ ಸ್ವೀಕಾರಾರ್ಹವಲ್ಲವಾದರೂ, ಅದು ಕಾನೂನಿನಡಿ ಅಪರಾಧವಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.

- Advertisement -

ಈ ರೀತಿಯ ಸಂಬಂಧ ಹೊಂದಿರುವ ಜೋಡಿಯೊಂದರ ಮಹಿಳೆಯ ಕುಟುಂಬಸ್ಥರ ಕಿರುಕುಳದಿಂದ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಕೋರ್ಟ್ ಈ ತೀರ್ಪು ನೀಡಿದೆ. ದೇಶದ ವಿವಿಧ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ‘ಲವ್ ಜಿಹಾದ್’ ಕಾನೂನು ಜಾರಿಗೊಳಿಸುವ ಹೊತ್ತಿನಲ್ಲಿ ಈ ತೀರ್ಪು ಮಹತ್ವವನ್ನು ಪಡೆದಿದೆ.