ಬಿಜೆಪಿ ಮುಖಂಡರು ಸತ್ತರೆ ಕಾಂಗ್ರೆಸ್ಸಿನಿಂದ 1 ಕೋಟಿ ರೂ. ಪರಿಹಾರ: ಅಮರೇಗೌಡ ಪಾಟೀಲ್

Prasthutha|

ಕೊಪ್ಪಳ: ಬಿಜೆಪಿ ಮುಖಂಡರಲ್ಲಿ ಯಾರಾದರೂ ಸತ್ತರೆ ಕಾಂಗ್ರೆಸ್ ಪಕ್ಷದಿಂದ ಒಂದು ಕೋಟಿ ರೂ. ಪರಿಹಾರ ಕೊಡುವುದಾಗಿ ಶಾಸಕ ಅಮರೇಗೌಡ ಪಾಟೀಲ್ ಗುಡುಗಿದ್ದಾರೆ.
ಲಿಖಿಂಪುರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಬೆಂಗಾವಲಿನ ವಾಹನಗಳು ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹಾಯಿಸಿ ರೈತರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಸರ್ಕಾರ 45 ಲಕ್ಷ ರೂ. ಪರಿಹಾರ ಮಾತ್ರ ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಉತ್ತರ ಪ್ರದೇಶದಲ್ಲಿ ಪ್ರತಿಭಟನಾ ನಿರತ ರೈತರ ಹತ್ಯೆ ಖಂಡಿಸಿ ಕೊಪ್ಪಳದ ಕುಷ್ಟಗಿಯ ಬಸವೇಶ್ವರ ವೃತ್ತದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪಂಜಿನ ಮೆರವಣಿಗೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಬಿಜೆಪಿ ಅತ್ಯಂತ ಕೆಟ್ಟ ಸರ್ಕಾರ ಎಂದು ನಿರೂಪಿಸಿದೆ. ಚಳಿ, ಹಿಮ, ಮಳೆ ಲೆಕ್ಕಿಸದೇ ಹರ್ಯಾಣ, ಪಂಜಾಬ್, ಛತ್ತೀಸಗಢ ರೈತರ ಪ್ರತಿಭಟನೆ ನಡೆಯುತ್ತಿದೆ. ಈ ರೈತರ ಪ್ರತಿಭಟನೆಯಲ್ಲಿ ಕೇಂದ್ರ ಗೃಹಖಾತೆ ರಾಜ್ಯ ಸಚಿವರ ಪುತ್ರನ ಕಾರು ರೈತನ ಮೇಲೆ ಹರಿದು, 8 ಜನ ರೈತರ ಹತ್ಯೆಗೆ ಕಾರಣರಾಗಿದ್ದಾರೆ. ಈ ಸಂಬಂಧ ಆರೋಪಿ ಬಂಧಿಸದೇ 45 ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ದೇಶದಲ್ಲಿ ಬಿಜೆಪಿ ತೊಲಗುವವರೆಗೂ ಈ ಹೋರಾಟ ನಡೆಯಲಿದೆ ಎಂದಿದ್ದಾರೆ.

Join Whatsapp