ಶಾಸಕ ಉಮಾನಾಥ ಕೋಟ್ಯಾನ್ ಸಮಾನತೆ ಹೇಳಿಕೆ ಕೇವಲ ಚುನಾವಣೆ ಗಿಮಿಕ್: ಅಲ್ಫೋನ್ಸ್ ಫ್ರಾಂಕೋ

Prasthutha|

ಸುರತ್ಕಲ್: ಮೂಡಬಿದರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅವರು ಅಲ್ಪಸಂಖ್ಯಾತರ ಸಭೆಯೊಂದರಲ್ಲಿ ಯಾವುದೇ ಭೇದಭಾವ ಮಾಡದೇ ಸಮಾನವಾಗಿ ಕೆಲಸ ಮಾಡಿದ್ದೇನೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಮೂಡಬಿದರೆ ವಿಧಾನಸಭಾ ಕ್ಷೇತ್ರದ SDPI ಅಭ್ಯರ್ಥಿ ಅಲ್ಫೋನ್ಸ್ ಫ್ರಾಂಕೋ, ಬಿಜೆಪಿಯ ಕಳಪೆ ಅಭಿವೃದ್ಧಿ ಕಂಡು ಸ್ವಪಕ್ಷದಲ್ಲೇ ವಿರೋಧವಿರುವುದರಿಂದ ಸೋಲುವ ಭೀತಿ ಉಮಾನಾಥ್ ಕೋಟ್ಯಾನ್ ರಿಗೆ ಎದುರಾಗಿದೆ. ಅದಕ್ಕೆ ಈಗ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿದ್ದು, ಚುನಾವಣೆ ಮುಗಿದ ಮೇಲೆ ಮತ್ತದೇ ಕೋಮು ದ್ವೇಷವನ್ನು ಮೈಗೆ ಅಂಟಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

- Advertisement -

ಮೂಡಬಿದ್ರೆಯಲ್ಲಿ ಅನೈತಿಕ ಪೋಲೀಸ್’ಗಿರಿ ಹೆಸರಿನಲ್ಲಿ ಬಂಧಿತರಾದ ಗೂಂಡಾಗಳನ್ನು ರಾತ್ರೋರಾತ್ರಿ ಠಾಣೆಯಿಂದಲೇ ಬಿಡಿಸಿಕೊಂಡು ಬಂದದ್ದು ಯಾವ ರೀತಿ ಸಮಾನತೆ ಎಂಬುದನ್ನು ಉಮಾನಾಥ ಕೋಟ್ಯಾನ್ ತಿಳಿಸಬೇಕು. ಸುರತ್ಕಲ್ ನಲ್ಲಿ ಮತೀಯ ಗೂಂಡಾಗಿರಿಗೆ ತಮ್ಮದೇ ಕ್ಷೇತ್ರಕ್ಕೊಳಪಟ್ಟ ಮುಸ್ಲಿಂ ಯುವಕ ಫಾಝಿಲ್ ಕೊಲೆ ನಡೆದಾಗ ಭೇಟಿಕೊಡುವುದು ಬಿಡಿ ಸೌಜನ್ಯಕ್ಕಾದರೂ ಖಂಡಿಸುವಷ್ಟು ಸಮಾನತೆ ಇರಲಿಲ್ಲ. ವಿಧಾನಸಭೆಯಲ್ಲಿ ಅದರ ಬಗ್ಗೆ ಧ್ವನಿ ಎತ್ತಿ ನ್ಯಾಯ ಕೊಡಿಸುವಷ್ಟು ತಾಳ್ಮೆ ಇರಲಿಲ್ಲ ಎಂದ ಮೇಲೆ ನಿಮ್ಮದು ಸಮಾನತೆ ಅಲ್ಲ ಕೇವಲ ಚುನಾವಣೆ ಗಿಮಿಕ್ ಆಗಿದೆ ಎಂದು ಫ್ರಾಂಕೋ ಕಿಡಿಕಾರಿದ್ದಾರೆ.



Join Whatsapp