ಮಾಧ್ಯಮ ಸಿಬ್ಬಂದಿಗೆ ಅಂಚೆ ಮೂಲಕ ಮತದಾನಕ್ಕೆ ಅವಕಾಶ: ಚುನಾವಣಾ ಆಯೋಗ

Prasthutha|

ನವದೆಹಲಿ: ಮುಂಬರುವ ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಮಾಧ್ಯಮ ಸಿಬ್ಬಂದಿಗೆ ಅಂಚೆ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗುವುದೆಂದು ಚುನಾವಣಾ ಆಯೋಗ ತಿಳಿಸಿದೆ.

- Advertisement -

ಈ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ನ ಮುಖ್ಯ ಚುನಾವಣಾಧಿಕಾರಿ ಕರುಣಾ ರಾಜು, ಮತದಾನದ ದಿನ ಗೈರು ಹಾಜರಾಗುವ ಮಾಧ್ಯಮ ಸಿಬ್ಬಂದಿ ತಮ್ಮ ಸ್ಥಳೀಯ ರಿಟರ್ನಿಂಗ್ ಅಧಿಕಾರಿ (ಆರ್.ಒ) ಅವರನ್ನು ಭೇಟಿಯಾಗಿ ಅರ್ಜಿ 12 – ಡಿ ಅನ್ನು ಭರ್ತಿ ಮಾಡಬಹುದು. ಆ ಬಳಿಕ ನೋಡೆಲ್ ಅಧಿಕಾರಿಗಳು ಈ ಅರ್ಜಿಯನ್ನು ಪರಿಶೀಲನೆ ನಡೆಸಿ ಅಂಚೆ ಮತದಾನಕ್ಕೆ ಅವಕಾಶ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ ಕರ್ತವ್ಯ ನಿರತ ಚುನಾವಣಾ ಸಿಬ್ಬಂದಿ, ಯೋಧ, ಕೊರೊನಾ ಸೋಂಕಿತರು, 80 ವರ್ಷ ಮೇಲ್ಪಟ್ಟವರಿಗೆ ಮಾತ್ರ ಅಂಚೆಯ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಈ ಬಾರಿ ಮಾಧ್ಯಮ ಸಿಬ್ಬಂದಿಯ ಜೊತೆಗೆ ಅಗ್ನಿಶಾಮಕ ದಳ ಸಿಬ್ಬಂದಿ, ಆಕಾಶವಾಣಿ ಸಿಬ್ಬಂದಿ, ಆಹಾರ ಮತ್ತು ಗ್ರಾಹಕ ಸೇವಾ ಸಿಬ್ಬಂದಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

- Advertisement -

ಸಾಮಾನ್ಯ ಮತದಾನಕ್ಕೂ ಮೊದಲು ನಿಗದಿಯಾದ ಸತತ 3 ದಿನಗಳವರೆಗೆ ವಿಧಾನಸಭಾ ಕ್ಷೇತ್ರವೊಂದರಲ್ಲಿ ಅಂಚೆ ಮತದಾನ ಕೆಂದ್ರ ತೆರೆದಿಡುತ್ತದೆ. ಈ ವೇಳೆ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ವರೆಗೆ ಅಂಚೆ ಮತದಾನ ನಡೆಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.



Join Whatsapp