ಮತಾಂತರ ಆರೋಪ: ಸಂಘಪರಿವಾರದಿಂದ ಪಾರ್ಕ್ ನಲ್ಲಿ ಗದ್ದಲ

Prasthutha|

ಹಾಸನ: ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಸಂಘಪರಿವಾರದ ಕಾರ್ಯಕರ್ತರು ಹಾಸನದ ಮಹಾರಾಜ ಪಾರ್ಕ್ ನಲ್ಲಿ ಗದ್ದಲ ವೆಬ್ಬಿಸಿದ ಘಟನೆ ಬುಧವಾರ ನಡೆದಿದೆ.

- Advertisement -


ಮಹಾರಾಜ ಪಾರ್ಕ್ ನಲ್ಲಿ ರಾಧಮ್ಮ ಮತ್ತು ಚಂದ್ರಶೇಖರ್ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಸಂಬಂಧಿಸಿದ ಭಿತ್ತಿಪತ್ರ ಹಾಗೂ ಏಸುಕ್ರಿಸ್ತರ ನೀತಿ ಕಥೆ ಪುಸ್ತಕಗಳನ್ನು ಸಾರ್ವಜನಿಕರಿಗೆ ಹಂಚುತ್ತಿದ್ದರು. ಈ ವೇಳೆ ಸಂಘಪರಿವಾರದ ಕಾರ್ಯಕರ್ತರು ಆಗಮಿಸಿ ಇಬ್ಬರನ್ನು ತರಾಟೆಗೆ ತೆಗೆದುಕೊಂಡು ಇಲ್ಲಿ ಕ್ರಿಶ್ಚಿಯನ್ ಧರ್ಮದ ಪ್ರಚಾರ ಮಾಡಬಾರದು ಎಂದು ಎಚ್ಚರಿಸಿದರು.


ವಿಷಯ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆದು ಎಲ್ಲರನ್ನೂ ಅಲ್ಲಿಂದ ಚದುರಿಸಿದರು.



Join Whatsapp