ಪ್ರತಿ ಕೋವಿಡ್ ಸಾವಿಗೆ 50, 000 ಸಾವಿರ ಪರಿಹಾರ: ಒಕ್ಕೂಟ ಸರ್ಕಾರ ಘೋಷಣೆ

Prasthutha|

ನವದೆಹಲಿ: ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ರಾಜ್ಯ ಸರ್ಕಾರದ ವತಿಯಿಂದ 50,0000 ಪರಿಹಾರವನ್ನು ಒದಗಿಸಲಾಗುವುದೆಂದು ಕೇಂದ್ರ ಸರ್ಕಾರ ಇಂದು ಸುಪ್ರೀಮ್ ಕೋರ್ಟ್ ಗೆ ತಿಳಿಸಿದೆ.

ಈ ಹಿಂದೆ ಮೃತಪಟ್ಟ ಮತ್ತು ಭವಿಷ್ಯದಲ್ಲಿ ಸಾವನ್ನಪ್ಪುವ ಕುಟುಂಬಗಳಿಗೆ ಪರಿಹಾರ ಧನವನ್ನು ಒದಗಿಸಲಾಗುವುದೆಂದು ನ್ಯಾಯಾಲಯಕ್ಕೆ ತಿಳಿಸಿದೆ.

- Advertisement -

ಕೋವಿಡ್ ಹಿನ್ನೆಲೆಯಲ್ಲಿ ಮೃತ ಕುಟುಂಬಕ್ಕೆ ರಾಜ್ಯ ಸರ್ಕಾರವು ವಿಪತ್ತು ನಿಧಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಅಥವಾ ಜಿಲ್ಲಾಡಳಿತ ಮೂಲಕ ಪರಿಹಾರವನ್ನು ಒದಗಿಸಲಾಗುವುದೆಂದು ಸರ್ಕಾರ ಇಂದು ತಿಳಿಸಿದೆ.

- Advertisement -