‘ನೈಕಾ’ದಲ್ಲಿ ಹತ್ತುಪಟ್ಟು ಲಾಭಗಳಿಸಿದ ಆಲಿಯಾ,ಕತ್ರಿನಾ ಕೈಫ್ !

Prasthutha|

ಮುಂಬಯಿ: ಸೌಂದರ್ಯವರ್ಧಕ ಸಾಧನಗಳ ಆನ್‌ಲೈನ್‌ ಮಾರುಕಟ್ಟೆಯಾದ ನೈಕಾ ಕಂಪನಿಯ ಷೇರುಗಳು ಷೇರು ಮಾರುಕಟ್ಟೆಯಲ್ಲಿ ಮೊದಲ ದಿನವೇ 96%ದಷ್ಟು ಮೌಲ್ಯವನ್ನು ಹೆಚ್ಚಿಸಿಕೊಂಡಿದೆ.
ಇದರಿಂದಾಗಿ IPO ಮೂಲಕ ಕಂಪನಿಯ ಷೇರುಗಳನ್ನು ಖರೀದಿಸಿದ್ದವರ ಹೂಡಿಕೆಯು ದುಪ್ಪಟ್ಟಾಗಿದೆ.
ನೈಕಾ‌ ಕಂಪನಿಯ ಮೇಲೆ ಹೂಡಿಕೆ ಮಾಡಿದ್ದ ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್ ಹಾಗೂ ಆಲಿಯಾ ಭಟ್ ಇದೀಗ ಭರ್ಜರಿ ಲಾಭಗಳಿಸಿದ್ದಾರೆ ಎನ್ನಲಾಗಿದೆ.

- Advertisement -


2020ರ ಜುಲೈನಲ್ಲಿ ಆಲಿಯಾ ಭಟ್​ ನೈಕಾ ಕಂಪನಿಯಲ್ಲಿ 4.95 ಕೋಟಿ ಬಂಡವಾಳ ಹೂಡಿದ್ದರು. ಈಗ ಹೂಡಿಕೆಗಿಂತ 10 ಪಟ್ಟು ಹೆಚ್ಚು ಹಣವನ್ನು ಆಲಿಯಾ ಗಳಿಸಿದ್ದಾರೆ ಎಂದು ಷೇರು ಪೇಟೆ ತಜ್ಞರು ಲೆಕ್ಕಾಚಾರ ನೀಡಿದ್ದಾರೆ, 4.94 ಕೋಟಿ ರುಪಾಯಿ ಇದ್ದ ಆಲಿಯಾ ಭಟ್​ ಹೂಡಿಕೆ ಈಗ 54 ಕೋಟಿ ರೂಪಾಯಿ ತಲುಪಿದೆ ಎನ್ನಲಾಗುತ್ತಿದೆ.ಮತ್ತೊಂದೆಡೆ ಕತ್ರಿನಾ ಕೈಫ್​ 2018ರಲ್ಲಿ ನೈಕಾ ಸಂಸ್ಥೆ ಮೇಲೆ 2.02 ಕೋಟಿ ಹೂಡಿಕೆ ಮಾಡಿದ್ದರು ಈಗ ಕತ್ರಿನಾ ಕೈಫ್​ ಹೂಡಿಕೆ ಮೊತ್ತ ಈಗ 22 ಕೋಟಿ ತಲುಪಿದೆ.

ಕೋಟಕ್ ಮಹೀಂದ್ರಾ ಗ್ರೂಪ್’ನಲ್ಲಿ ಸಲಹೆಗಾರ್ತಿಯಾಗಿದ್ದ ಫಲ್ಗುಣಿ ನಾಯರ್, 9 ವರ್ಷಗಳ ಹಿಂದೆ
ಕಾಸ್ಮೆಟಿಕ್ಸ್‌ ವಲಯದ ಇ-ಕಾಮರ್ಸ್‌ ಕಂಪನಿ ನೈಕಾವನ್ನು ಸ್ಥಾಪಿಸಿದ್ದರು. ನೈಕಾ ಕಂಪನಿಯನ್ನು ನಾಯರ್, ಇದೀಗ 1 ಲಕ್ಷ ಕೋಟಿ ರೂ.ಗಳ ದಿಗ್ಗಜ ಕಂಪನಿಯನ್ನಾಗಿ ಪರಿವರ್ತಿಸಿದ್ದಾರೆ.ಜೊತೆಗೆ ಭಾರತದ ಮೊದಲ ಸೆಲ್ಫ್‌ ಮೇಡ್‌ ಬಿಲಿಯನೇರ್‌ ಮಹಿಳೆ ಪಟ್ಟವನ್ನು ಅಲಂಕರಿಸಿದ್ದಾರೆ.

- Advertisement -

ಮುಂಬಯಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಕಾ. ಕೋಲ್‌ ಇಂಡಿಯಾ, ಬಿಪಿಸಿಎಲ್‌, ಬ್ರಿಟಾನಿಯಾ ಇತ್ಯಾದಿ ದಿಗ್ಗಜ ಕಂಪನಿಗಳನ್ನೂ ಮಾರುಕಟ್ಟೆ ಮೌಲ್ಯದಲ್ಲಿ ಹಿಂದಿಕ್ಕಿದೆ.

Join Whatsapp