ಅಲ್ ಹಸ್ಸಾ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಐ.ಎಸ್.ಎಫ್ ವತಿಯಿಂದ ಕ್ರಿಕೆಟ್ ಪಂದ್ಯಾವಳಿ

Prasthutha|

ಅಲ್ ಹಸ್ಸಾ (ದಮ್ಮಾಮ್): ಇಂಡಿಯನ್ ಸೋಶಿಯಲ್ ಫೋರಂ, ಅಲ್ ಹಸ್ಸಾ ಘಟಕದ ವತಿಯಿಂದ
75ನೇಯ ಸ್ವಾತಂತ್ಯ್ರ ದಿನಾಚರಣೆಯ ಪ್ರಯುಕ್ತ ಇಲ್ಲಿನ ಮುನೈಝಿಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ನಡೆಸಲಾಯಿತು.

- Advertisement -

ಪಂದ್ಯಾಟದ ಭಾಗವಾಗಿ ಸಭಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ತ್ರಿವರ್ಣ ಬಲೂನ್ ಹಾರಿಸುವ ಮೂಲಕ ಪಂದ್ಯಾಟ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಇಂಡಿಯನ್ ಸೋಶಿಯಲ್ ಫೋರಂ ನ ಅಲ್ ಹಸ್ಸಾ ಘಟಕದ ನಾಯಕ ಬಶೀರ್ ಮಡಿಕೇರಿ ವಹಿಸಿದ್ದರು. ಇಂಡಿಯನ್ ಸೋಶಿಯಲ್ ಫೋರಂ ನ ಪೂರ್ವ ಪ್ರಾಂತ್ಯದ ಪ್ರಧಾನ ಕಾರ್ಯದರ್ಶಿ ಇರ್ಷಾದ್ ಜೋಕಟ್ಟೆ ಸ್ವಾತಂತ್ಯ್ರದ ಸಂದೇಶವನ್ನು ನೀಡಿದರು.

ಇಂಡಿಯಾ ಫ್ರೆಟರ್ನಿಟಿ ಫೋರಂ ದಮ್ಮಾಮ್, ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಸಾಜಿದ್ ವಳವೂರು ಮಾತನಾಡಿ ಭಾರತ ದೇಶದ ಪ್ರಸ್ತುತ ಪರಿಸ್ಥಿತಿಯಲ್ಲಿ ಎಲ್ಲ ಜಾತ್ಯತೀತ ಮನಸುಗಳು ಒಂದುಗೂಡಿ ಫ್ಯಾಶಿಸಂನ ವಿರುದ್ಧವಾಗಿ ಹೋರಾಡಲು ಕರೆ ನೀಡಿದರು.

- Advertisement -

ವೇದಿಕೆಯಲ್ಲಿ ಇಂಡಿಯಾ ಫ್ರೆಟರ್ನಿಟಿ ಫೋರಂ ಅಲ್ ಹಸ್ಸಾ ಘಟಕದ ಅಧ್ಯಕ್ಷ ಅಬ್ಬಾಸ್ ಗುರುಪುರ, ಇಂಡಿಯನ್ ಸೋಶಿಯಲ್ ಫೋರಂ ನ ಅಲ್ ಹಸ್ಸಾ ಘಟಕದ ಉಪಾಧ್ಯಕ್ಷ ಶೌಕತ್ ಮನಾಲ್, ಉದ್ಯಮಿಗಳಾದ ಬಶೀರ್ ಬುಸೈರ್, ಇಕ್ಬಾಲ್ ಕಲ್ಲಡ್ಕ, ಖಾದರ್ ಮೂಡಬಿದ್ರೆ, ಇಂಡಿಯಾ ಪ್ರೆಟರ್ನಿಟಿ ಫೋರಂ ನ ಜಿಲ್ಲಾ ಸದಸ್ಯರಾದ ಹನೀಫ್ ಜೋಕಟ್ಟೆ, ಇಂಡಿಯಾ ಫ್ರೆಟರ್ನಿಟಿ ಫೋರಂ ನ ಡೆಲ್ಲಿ ಘಟಕದ ಕಾರ್ಯದರ್ಶಿ ಅಜೀಝ್ ಮಹಾರಾಷ್ಟ್ರ ಉಪಸ್ಥಿತಿದ್ದರು ಸಮಾರೋಪ ಸಮಾರಂಭದ ವೇಳೆ ಕ್ರಿಕೆಟ್ ಪಂದ್ಯಾಟ ದಲ್ಲಿ ಪ್ರಥಮ ಸ್ಥಾನ ಪಡೆದ ಎಕ್ಸ್ ಫರ್ಟ್ ತಂಡ ಹಾಗೂ ದ್ವಿತೀಯ ಸ್ಥಾನಿಯಾದ ಯುನೈಟೆಡ್ ಮಂಗಳೂರು ತಂಡಕ್ಕೆ ಪ್ರಶಸ್ತಿ ವಿತರಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಹಾಗು ನಿರೂಪಣೆಯನ್ನು ಸಾಹುಲ್ ಹಮೀದ್ ಉಜಿರೆ ನಿರ್ವಹಿಸಿದರು. ಇಂಡಿಯನ್ ಸೋಶಿಯಲ್ ಫೋರಂನ ಅಲ್ ಹಸ್ಸಾ ಘಟಕದ ಪ್ರಧಾನ ಕಾರ್ಯದರ್ಶಿ ಫಾರೂಕ್ ಕಾವಲ್ ಕಟ್ಟೆ ಧನ್ಯವಾದ ಸಮರ್ಪಿಸಿದರು.



Join Whatsapp