ರೈತರ ಚಳವಳಿಗೆ ಬೆಂಬಲಿಸಿದ ಅಖಿಲೇಶ್ ಯಾದವ್ ಪೊಲೀಸ್ ವಶಕ್ಕೆ

Prasthutha|

ಲಖನೌ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಬೆಂಬಲಿಸಲು ಕನೌಜ್ ಗೆ ತೆರಳಲುದ್ದೇಶಿಸಿದ್ದ ಸಮಾಜವಾದಿ ಪಕ್ಷದ ನಾಯಕ, ಉತ್ತರ ಪ್ರದೇಶ ಮಾಜಿ ಸಿಎಂ ಅಖಿಲೇಶ್ ಯಾದವ್ ರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

ಕನೌಜ್ ಗೆ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಲು ಅಖಿಲೇಶ್ ಸಿದ್ಧರಾಗಿದ್ದರು. ಆದರೆ, ಅವರನ್ನು ತಡೆಯಲಾದ ಹಿನ್ನೆಲೆಯಲ್ಲಿ ಅವರು ಮನೆಯಲ್ಲೇ ಧರಣಿ ನಡೆಸಿದರು. ಬಳಿಕ ಕಾರ್ಯಕರ್ತರೊಂದಿಗೆ ರೈತರ ಚಳವಳಿಗೆ ತೆರಳಲು ಯತ್ನಿಸಿದರು. ಹೀಗಾಗಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.

ಹೊಸ ಕೃಷಿ ಕಾಯ್ದೆಗಳು ರೈತರಿಗೆ ನೆರವಾಗುವುದಾಗಿದ್ದರೆ, ಅವರು ಏಕೆ ಇಷ್ಟೆಲ್ಲಾ ಪ್ರತಿಭಟನೆ ಮಾಡುತ್ತಿದ್ದರು? ಇಷ್ಟೆಲ್ಲಾ ಪ್ರತಿಭಟನೆ ನಡೆದರೂ ಸರ್ಕಾರ ಏಕೆ ತನ್ನ ನಿಲುವನ್ನು ಬದಲಿಸಿಕೊಂಡಿಲ್ಲ? ಸರ್ಕಾರ ತಮ್ಮ ನಿಲುವಿನಿಂದ ಹಿಂದಕ್ಕೆ ಸರಿಯಬೇಕು” ಎಂದು ಅಖಿಲೇಶ್ ಒತ್ತಾಯಿಸಿದ್ದಾರೆ.

- Advertisement -

ಅವರು ನಮ್ಮನ್ನು ಬಂಧಿಸಬಹುದು. ಕಣ್ಣು ಹಾಯುವಷ್ಟು ಉದ್ದಕ್ಕೂ ಜನರಿದ್ದಾರೆ, ಯಾರನ್ನೆಲ್ಲಾ ಬಂಧಿಸುತ್ತೀರಿ ಎಂದು ಅವರು ಪ್ರಶ್ನಿಸಿದ್ದಾರೆ.  

Join Whatsapp