ದೂರು ನೀಡಲು ಬಂದ ಯುವತಿಗೆ ಬೆಲ್ಟ್ ನಿಂದ ಹಲ್ಲೆ ಮಾಡಿದ ಎಸ್ ಐ | ಅಸಭ್ಯ ವರ್ತನೆ

Prasthutha|

ತಿರುಪತಿ : ದೂರು ನೀಡಲು ಬಂದ ಯುವತಿಯೊಬ್ಬರ ಮೇಲೆ ಪೊಲೀಸ್ ಅಧಿಕಾರಿಯೇ ಬೆಲ್ಟ್ ನಿಂದ ಹಲ್ಲೆ ಮಾಡಿ, ಅಸಭ್ಯವಾಗಿ ವರ್ತಿಸಿದ ಆರೋಪ ಆಂಧ್ರ ಪ್ರದೇಶದ ತಿರುಪತಿಯಿಂದ ಕೇಳಿಬಂದಿದೆ. ದೂರಿನ ಪ್ರತಿಯನ್ನೂ ನೋಡದೆ, ಯುವತಿಯ ಮೇಲೆ ಸಬ್ ಇನ್ಸ್ ಪೆಕ್ಟರ್ ಯುವತಿಯ ಮೇಲೆ ಹಲ್ಲೆ ಮಾಡಿದ್ದು, ಈ ಸಂಬಂಧ ತನಿಖೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಆದೇಶಿಸಿದ್ದಾರೆ.

ತಿರುಪತಿ ಉಪನಗರ ಉಪ್ಪರಪಲ್ಲೆ ನಿವಾಸಿ ವನಿತಾವಾಣಿ ಹಾಗೂ ನೆರೆಮನೆಯವರ ನಡುವೆ ಯಾವುದೋ ಒಂದು ವಿಚಾರವಾಗಿ ವಾಗ್ವಾದ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬ ವನಿತಾ ಮೇಲೆ ಹಲ್ಲೆ ಮಾಡಿದ್ದ. ಈ ಕುರಿತು ದೂರು ನೀಡಲು ಎಂಆರ್ ಪಲ್ಲಿ ಪೊಲೀಸ್ ಠಾಣೆಗೆ ಬಂದಾಗ ಈ ಘಟನೆ ನಡೆದಿದೆ.

- Advertisement -

ದೂರು ಸ್ವೀಕರಿಸದ ಎಸ್ ಐ, ನನ್ನ ಮೇಲೆ ಬೆಲ್ಟ್ ನಿಂದ ಹಲ್ಲೆ ಮಾಡಿದ್ದಲ್ಲದೆ, ನನ್ನೊಂದಿಗೆ ಅಸಭ್ಯವಾಗಿ ವರ್ತಿಸಿದರು ಎಂದು ಯುವತಿ ಆರೋಪಿಸಿ ಕಣ್ಣೀರಿಟ್ಟಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಈ ಸಂಬಂಧ ದೂರು ನೀಡಿದ್ದಾರೆ.

- Advertisement -