ನವದೆಹಲಿ: ಪ್ರವಾದಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾರಿಗೆ ಬೆದರಿಕೆ ಹಾಕಿದ ಆರೋಪದಡಿ ಅಜ್ಮೀರ್ ದರ್ಗಾದ ಮೌಲ್ವಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಸಲ್ಮಾನ್ ಚಿಸ್ತಿ , ಪ್ರವಾದಿ ಮುಹಮ್ಮದ್ ಅವರನ್ನು ಅವಮಾನಿಸಿದ್ದಕ್ಕಾಗಿ ನೂಪುರ್ ಶರ್ಮಾರನ್ನು ಗುಂಡಿಟ್ಟು ಸಾಯಿಸಬೇಕು. ಆಕೆಯ ತಲೆಯನ್ನು ತಂದವರಿಗೆ ನನ್ನ ಮನೆಯನ್ನೇ ಗಿಫ್ಟ್ ಆಗಿ ನೀಡುತ್ತೇನೆಂದು ವಿಡಿಯೋದಲ್ಲಿ ಘೋಷಿಸಿದ್ದರು ಎನ್ನಲಾಗಿದೆ.
ಅವರ ಪ್ರಚೋದನಕಾರಿ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆ ಸಲ್ಮಾನ್ ಚಿಸ್ತಿ ವಿರುದ್ಧ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ವ್ಯಕ್ತಿಯೊಬ್ಬರು ಸೋಮವಾರ ರಾತ್ರಿ ದರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.