ಲಕ್ನೋ: ನಾವು ಕಾನೂನು ಸುವ್ಯವಸ್ಥೆ ಪಾಲಕರು. ಆದ್ದರಿಂದ ಲಖಿಂಪುರ ಖೇರಿಯ ಎಂಟು ವಿಧಾನ ಸಭಾ ಕ್ಷೇತ್ರಗಳನ್ನು ಬಿಜೆಪಿ ಗೆದ್ದಿದೆ. ಒಂದು ವೇಳೆ ಬಿಜೆಪಿ ಇಲ್ಲಿ ಸೋತಿದ್ದರೆ ಕಾನೂನು ಸುವ್ಯವಸ್ಥೆ ಸರಿ ಇರುತ್ತಿರಲಿಲ್ಲ ಎಂದು ಕೇಂದ್ರ ಗೃಹ ರಾಜ್ಯ ಸಚಿವ ಅಜಯ್ ಮಿಶ್ರಾ ಹೇಳಿದ್ದಾರೆ.
ಈ ಮಂತ್ರಿಯ ಮಗ ಆಶಿಸ್ ಮಿತ್ರ ರೈತರ ಮೇಲೆ ವಾಹನ ಹಿರಿಸ ಓರ್ವ ಪತ್ರಕರ್ತನ ಸಹಿತ ಐವರು ರೈತರ ಸಾವಿಗೆ ಕಾರಣವಾಗಿದ್ದರು. ಅದೇ ಹಿಂಸೆಯಲ್ಲಿ ಇನ್ನೂ ಮೂವರು ಸಾವಿಗೀಡಾಗಿದ್ದರು.
ಕಾರು ಹತ್ತಿಸಿದ ಆರೋಪ ಹೊತ್ತಿರುವ ಅಜಯ್ ಮಿಶ್ರಾ ಜಾಮೀನಿನ ಮೇಲೆ ಹೊರಗಿದ್ದಾರೆ. ಚುನಾವಣೆ ಸಮಯದಲ್ಲಿ ಎಲ್ಲ ವ್ಯವಹಾರ ನೋಡಿಕೊಂಡಿದ್ದಾರೆ. ಆ ವಲಯದ ಒಂದು ವಿಧಾನ ಸಭಾ ಕ್ಷೇತ್ರದ ಹೊರತು ಬೇರೆಲ್ಲ ಬಿಜೆಪಿ ವಶವಾಗಿರುವುದರಿಂದ ಕಾನೂನು ಸುವ್ಯವಸ್ಥೆ ಚೆನ್ನಾಗಿರಲೇ ಬೇಕು ಎನ್ನುತ್ತಾರೆ ಅಜಯ್ ಮಿಶ್ರಾ.
ಒಂದು ವೇಳೆ ಎಸ್ ಪಿ ಗೆದ್ದಿದ್ದರೆ ಇಡೀ ರಾಜ್ಯ ಕಾನೂನು ಸುವ್ಯವಸ್ಥೆ ಇಲ್ಲದೆ ಗಲಾಟೆ ಗೂಡಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.