ಭಾರತದಲ್ಲಿ 5ಜಿ ಸೇವೆ ನೀಡಲು ಕ್ವಾಲ್ಕಾಮ್ ನೊಂದಿಗೆ ಕೈ ಜೋಡಿಸಿದ ಏರ್ಟೆಲ್

Prasthutha|

ವರ್ಚುವಲೈಸ್ಡ್ ಮತ್ತು ಓಪನ್ ರಾನ್ ಆಧಾರಿತ 5 ಜಿ ನೆಟ್‌ವರ್ಕ್‌ಗಳನ್ನು ಹೊರತರಲು ಯುಎಸ್ ಚಿಪ್‌ ಮೇಕರ್ ಕ್ವಾಲ್ಕಾಮ್‌ ನ 5 ಜಿ ರಾನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದಾಗಿ ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್ ಭಾರತಿ ಏರ್ಟೆಲ್ ಮಂಗಳವಾರ ಹೇಳಿದೆ.

- Advertisement -

ಒ-ರಾನ್ ಅಲೈಯನ್ಸ್ ನ ಮಂಡಳಿಯ ಸದಸ್ಯರಾಗಿ, ದೇಶದಲ್ಲಿ ಒ-ರಾನ್ ವಿಧಾನದ ಅನುಷ್ಠಾನಕ್ಕೆ ಬದ್ಧವಾಗಿದೆ ಎಂದು ಏರ್‌ಟೆಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಒ-ರಾನ್‌ ನ ಹೊಂದಿಕೊಳ್ಳುವ ಮತ್ತು ಸ್ಕೇಲೆಬಲ್ ಮಾಡಲ್ ಗಳು 5 ಜಿ ನೆಟ್‌ ವರ್ಕ್‌ಗಳ ನಿಯೋಜನೆಯಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳಿಗೆ ಕಾರ್ಯಸಾಧ್ಯವಾದ ಹೊಸ ಅವಕಾಶಗಳನ್ನ ಸೃಷ್ಟಿಸುತ್ತದೆ ಎಂದು ಹೇಳಿದೆ.

ಏರ್ಟೆಲ್-ಕ್ವಾಲ್ಕಾಮ್ ಸಹಯೋಗವು ದೇಶಾದ್ಯಂತ “ವೆಚ್ಚ ಪರಿಣಾಮಕಾರಿ ಮತ್ತು ತ್ವರಿತ ರೀತಿಯಲ್ಲಿ” ಬ್ರಾಡ್ಬ್ಯಾಂಡ್ ಸೇವೆಗಳನ್ನು ವೇಗವಾಗಿ ಪಡೆಯಲು ಅನುಮತಿಸುತ್ತದೆ ಎಂಬ ನಿರೀಕ್ಷೆಯಿದೆ.



Join Whatsapp