ಗಡಿ ಬಂದ್ ಮಾಡಿದ ಕರ್ನಾಟಕ | ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ಷೇಪ

Prasthutha|

ಮಂಗಳೂರು : ಕೇರಳದಲ್ಲಿ ಹೊಸ ಕೋವಿಡ್ 19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾಡಳಿತ ಕರ್ನಾಟಕ-ಕೇರಳ ಗಡಿಗಳನ್ನು ಮುಚ್ಚಿರುವುದಕ್ಕೆ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

- Advertisement -

ಗಡಿಗಳನ್ನು ಬಂದ್ ಮಾಡಿ, ವಾಹನಗಳಿಗೆ ನಿರ್ಬಂಧ ಹೇರಿರುವುದು ಕೇಂದ್ರ ಗೃಹ ಇಲಾಖೆ ಮಾರ್ಗಸೂಚಿ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ. ಗಡಿಗಳನ್ನು ಬಂದ್ ಮಾಡಿರುವ ಕರ್ನಾಟಕ ಸರಕಾರದ ತೀರ್ಮಾನವನ್ನು ಕೇಂದ್ರ ಸರಕಾರದ ಗಮನಕ್ಕೆ ತರಲಾಗುತ್ತದೆ. ಕೇಂದ್ರದ ಒಪ್ಪಿಗೆ ಇಲ್ಲದೇ ಯಾವುದೇ ರಾಜ್ಯವೂ ಗಡಿಗಳನ್ನು ಬಂದ್ ಮಾಡುವಂತಿಲ್ಲ ಎಂದು ಕೇರಳ ಹೇಳಿದೆ.

ಸೋಮವಾರ ಬೆಳಗ್ಗೆ 6 ಗಂಟೆಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೇರಳದಿಂದ ಆಗಮಿಸುವವರಿಗೆ ತಲಪಾಡಿ, ಸಾರಡ್ಕ, ನೆಟ್ಟಣಿಗ, ಮುಡ್ನೂರು, ಮೇಣಾಲ ಮತ್ತು ಜಾಲ್ಸೂರು ಮೂಲಕ ಮಾತ್ರ ಸಂಚಾರ ನಡೆಸಲು ಅವಕಾಶ ನೀಡಿದೆ.

- Advertisement -

ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವವರು ಕೋವಿಡ್ ನೆಗೆಟಿವ್ ವರದಿ ಇರುವುದನ್ನು ಖಚಿತಪಡಿಸಿಕೊಂಡು ಪ್ರವೇಶ ಪಡೆಯಬೇಕು ಎಂದು ಹೇಳಿದೆ. ಗಡಿ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆಯ ತಂಡ ತಪಾಸಣೆ ಕೈಗೊಂಡಿದೆ.

Join Whatsapp